ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಇತ್ತಿಚೇಗೆ ಆದಿವಾಸಿ ಸಮುದಾಯದ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ನಡೆದಿತ್ತು, ಇದರ ಬೆನ್ನಲ್ಲೇ ಆದಿವಾಸಿ ಯುವತಿಯರಿಗೆ ಕಿರುಕುಳ ನೀಡಿ, ಇಬ್ಬರು ಯುವಕರಿಗೆ ಮಲ ತಿನ್ನಿಸಿ, ಚಪ್ಪಲಿಯ ಮಾಲೆ ಹಾಕಿ ಊರೆಲ್ಲ ಮೆರವಣಿಗೆ ಮಾಡಿರುವ ಹೇಯ ಕೃತ್ಯ ತಡವಾಗಿ ಬೆಳಿಕಿಗೆ ಬಂದಿತ್ತು.
ಇದೀಗ ಮತ್ತೊಂದು ಘಟನೆ ನಡೆದಿದ್ದು, ಯವಕನೊಬ್ಬನಿಗೆ ತನ್ನ ಪಾದಗಳನ್ನು ನೆಕ್ಕುವಂತೆ ವ್ಯಕ್ತಿಯೊಬ್ಬ ಒತ್ತಾಯ ಮಾಡಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಗ್ವಾಲಿಯರ್ ನಡೆದಿದೆ ಎಂದು ಹೇಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಗ್ವಾಲಿಯರ್ ಜಿಲ್ಲೆಯ ದಾಬ್ರಾ ಪಟ್ಟಣದ ನಿವಾಸಿಗಳು ಎಂದು ಹೇಳಲಾಗುತ್ತಿದೆ. ಕಾರಿನಲ್ಲಿ ಕೂರಿಸಿಕೊಂಡು ಯುವಕನಿಗೆ ಪದೇ ಪದೇ ಆರೋಪಿಗಳು ಕಪಾಳಮೋಕ್ಷ ಮಾಡಿದು ಈ ವಿಡಿಯೋ ವೈರಲ್ ಆಗಿದೆ. ಇದ್ರಲ್ಲಿ ‘ಗೋಲು ಗುರ್ಜರ್ ಬಾಪ್ ಹೈ’ (ಗೋಲು ಗುರ್ಜರ್ ತಂದೆ) ಎಂದು ಹೇಳುವಂತೆ ಹಿಂಸೆ ನೀಡುತ್ತಿರುವುದು ಮತ್ತು ಆ ಯುವಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ರೆಕಾರ್ಡ್ ಆಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದಾಬ್ರಾ ಉಪ ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಒಪಿ) ವಿವೇಕ್ ಕುಮಾರ್ ಶರ್ಮಾ ಮಾತನಾಡಿ, ಶುಕ್ರವಾರ ಸಂಜೆ ವಾಹನದಲ್ಲಿ ವ್ಯಕ್ತಿಯೊಬ್ಬನನ್ನು ಥಳಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೊ ಕ್ಲಿಪ್ನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಯುವಕನ ಕುಟುಂಬದವರ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಅಪಹರಣ ಮತ್ತು ಥಳಿಸಿದಕ್ಕಾಗಿ ಭಾರತೀಯ ದಂಡ ಸಂಹಿತೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಶರ್ಮಾ ತಿಳಿಸಿದ್ದಾರೆ.
ಯುವಕ ಮತ್ತು ಆರೋಪಿಗಳು ಗ್ವಾಲಿಯರ್ ಜಿಲ್ಲೆಯ ದಾಬ್ರಾ ಪಟ್ಟಣದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತು ಮಾತನಾಡಿದ ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 341 (ಒಬ್ಬ ವ್ಯಕ್ತಿಯನ್ನು ತಪ್ಪಾಗಿ ನಿರ್ಬಂಧಿಸುವುದು), 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 324 (ಸ್ವಯಂಪ್ರೇರಿತವಾಗಿ ಆಯುಧ ಅಥವಾ ವಸ್ತುವಿನಿಂದ ಗಾಯಗೊಳಿಸುವುದು), 307 (ಕೊಲೆಗೆ ಯತ್ನ) ಮತ್ತು 34 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ( IPC) ಎಂದು ಹೇಳಿದ್ದಾರೆ.