ಕೊಳವೆಬಾವಿಯಲ್ಲಿ ಜೈನಮುನಿ ಮೃತದೇಹ ಪತ್ತೆ: ತಲೆ, ಕೈ-ಕಾಲುಗಳನ್ನು ಕತ್ತರಿಸಿ ಎಸೆದ ಹಂತಕರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹೀರೆಕುಡಿ (Hirekudi) ನಂದಿ ಪರ್ವತ ಆಶ್ರಮದ (Nandi Parvatha Ashram) ಜೈನಮುನಿ ಹತ್ಯೆಗೆ ಸಂಬಂಧಿಸಿದಂತೆ ಅನೇಕ ವಿಚಾರಗಳು ಹೊರಬರುತ್ತಿದ್ದು,ಹಂತಕರು ಭೀಕರವಾಗಿ ಕೊಲೆ ಮಾಡಿ ಕ್ರೌರ್ಯ ಮೆರೆದಿರುವುದು ಕಂಡುಬಂದಿದೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಜೈನ ಆಶ್ರಮದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಜು. 6ರಂದು ನಾಪತ್ತೆಯಾಗಿದ್ದು, ಇಂದು ಅವರ ಹತ್ಯೆಯ ಮಾಹಿತಿ ಹೊರಬಿದ್ದಿತ್ತು. ನಂತರ ಮತ್ತಷ್ಟು ತನಿಖೆ ತೀವ್ರಗೊಳಿಸಿದಾಗ 400 ಅಡಿ ಆಳದ ಕೊಳವೆಬಾಯಿಯಲ್ಲಿ (Borewell) ಮೃತದೇಹ ಪತ್ತೆಯಾಗಿದೆ.

ಹಂತಕರು ಸ್ವಾಮೀಜಿಯನ್ನು ಭೀಕರವಾಗಿ ಕೊಲೆ ಮಾಡಿದ್ದು, ಶವ ತುಂಡರಿಸಿದ್ದಾರೆ. ತಲೆಯನ್ನು ಇಬ್ಭಾಗ ಮಾಡಿದ್ದು, ಎರಡು ಕೈ, ಎರಡು ಕಾಲುಗಳನ್ನೂ ಕತ್ತರಿಸಿದ್ದಾರೆ. ತೊಡೆಯನ್ನು ಎರಡು ಭಾಗ ಮಾಡಿರುವ ಹಂತಕರು ಹೊಟ್ಟೆಯನ್ನೂ ಕತ್ತರಿಸಿ ಕ್ರೌರ್ಯ ಮೆರೆದಿದ್ದಾರೆ.
ಬಳಿಕ ರಾಯಬಾಗ ತಾಲೂಕಿನ ಕಟಕಬಾವಿ ಗ್ರಾಮದ ಗದ್ದೆಯಲ್ಲಿರುವ 400 ಅಡಿ ಆಳದ ಕೊಳವೆಬಾವಿಗೆ ಶವದ ತುಂಡುಗಳನ್ನು ಎಸೆದಿದ್ದರು. ಕೊಳವೆಬಾವಿಯ 25ನೇ ಅಡಿ ಆಳದಲ್ಲಿ ರಕ್ತಸಿಕ್ತ ಸೀರೆ, ಟವೆಲ್ ಪತ್ತೆಯಾಗಿದ್ದವು. ನಂತರ 30 ಅಡಿ ಆಳದಲ್ಲಿ ಶವದ 9 ತುಂಡುಗಳು ಪತ್ತೆಯಾಗಿವೆ.

ಹಣಕಾಸಿನ (Money) ವಿಚಾರವಾಗಿ ಸ್ವಾಮೀಜಿಯನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡ ಆರೋಪಿಗಳು, ಅವರ ಮೃತದೇಹವನ್ನು ಸುಮಾರು 400 ಅಡಿ ಉದ್ದದ ಕೊಳವೆ ಬಾವಿಯಲ್ಲಿ ಎಸೆದಿರುವುದಾಗಿ ಮಾಹಿತಿಯನ್ನು ನೀಡಿದ್ದರು. ಈ ಹಿನ್ನೆಲೆ 400 ಅಡಿ ಉದ್ದದ ಕೊಳವೆಬಾವಿಯಲ್ಲಿ 40 ಅಡಿಗೆ ಕೇಸಿಂಗ್ ಪೈಪ್ ಅಳವಡಿಸಿದ್ದು, ಸುಮಾರು 20 ಅಡಿ ಆಳದಲ್ಲಿ ಪತ್ತೆಯಾದ ಸ್ವಾಮೀಜಿ ಮೃತದೇಹವನ್ನು ಹೊರತೆಗೆಯಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!