ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ 9 ವರ್ಷದಲ್ಲಿ ಭಾರತೀಯ ರೈಲ್ವೆಯಲ್ಲಿ ಕೇಂದ್ರ ಸರಕಾರ ಅನೇಕ ಹೊಸತನವನ್ನು ನೀಡಿದ್ದು, ಇದರ ಜೊತೆಗೆ ಹಳೆಯ ಗತವೈಭವ ವನ್ನು ಮರುಸ್ಥಾಪಿಸುತ್ತಿದೆ.
ಇದೇ ಹಾದಿಯಲ್ಲೀಗ ಹೊಗೆ ಉಗುಳುತ್ತಾ ಸಾಗುತ್ತಿದ್ದ ರೈಲುಗಳನ್ನು ಮತ್ತೆ ತರುತ್ತಿದ್ದಾರೆ.
ಹೌದು, ಬ್ರಿಟಿಷರ ಕಾಲದಲ್ಲಿ ಆರಂಭಗೊಂಡ ಭಾರತದ ರೈಲು ಹಲವು ಬದಲಾವಣೆಯೊಂದಿಗೆ ಮುನ್ನುಗುತ್ತಿದೆ. ಈಗ ಬಹುತೇಕ ರೈಲುಗಳು ವಿದ್ಯುತ್ ಚಾಲಿತವಾಗಿದೆ. ಆದರೆ ಹಳೇ ಗತವೈಭವದ ಸವಿ ಅನುಭವಿಸಲು ಕೇಂದ್ರ ರೈಲ್ವೇ ಉಗಿಬಂಡಿ ಸೇವೆ ಮತ್ತೆ ಆರಂಭಿಸುತ್ತಿದೆ.
ಚೆನ್ನೈನ ಎಂಜಿಆರ್ ಕೇಂದ್ರ ರೈಲು ನಿಲ್ದಾಣದಲ್ಲಿ ಸ್ಟೀಮ್ ಎಂಜಿನ್ ಹೊಂದಿರುವ ಹೆರಿಟೇಜ್ ರೈಲು ಸೇವೆಯನ್ನು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಚಾಲನೆ ನೀಡಿದ್ದಾರೆ.
ನೂತನ ಹೆರಿಟೇಜ್ ರೈಲು ಪಾರಂಪರಿಕ ಸ್ಥಳಗಳ ಮೂಲಕ ಸಾಗಲಿದೆ. ಶೀಘ್ರದಲ್ಲೇ ದೇಶದ ಹಲವು ಭಾಗದ ಪ್ರೇಕ್ಷಣಿಯ ಸ್ಥಳಗಳಲ್ಲಿ ಹೆರಿಟೇಜ್ ರೈಲು ಸಾಗಲಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.