ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಬ್‌ಜಿ ಆನ್‌ಲೈನ್ ಗೇಮ್ ಮೂಲಕ ಪರಿಚಯವಾದ ಪ್ರಿಯಕರನಿಗಾಗಿ ತನ್ನ ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಬಂದ ಪಾಕ್ತಿಸ್ತಾನಿ ಮಹಿಳೆ ಈಗ ಭಾರತ ನನ್ನ ದೇಶ ಎಂದು ಸಂತಸಪಟ್ಟಿದ್ದಾಳೆ.
ಪಬ್‌ಜಿ ಆಟದ ಮೂಲಕ ಸೃಷ್ಟಿಯಾದ ಪ್ರೀತಿಗಾಗಿ ಪ್ರಿಯಕರನನ್ನು ಹುಡುಕಿ ಪಾಕ್ ಮಹಿಳೆ ಸೀಮಾ ಹೈದರ್ ಇತ್ತೀಚೆಗೆ ಭಾರತಕ್ಕೆ ಬಂದಿದ್ದರು. ಬಳಿಕ ಆಕೆ, ಮಕ್ಕಳು ಮತ್ತು ಪ್ರಿಯಕರ ಸಚಿನ್ ಸಿಂಗ್ ಅನ್ನು ಪೊಲೀಸರು ಬಂಧಿಸಿದ್ದರು. ಈಗ ಇಬ್ಬರನ್ನೂ ಬಿಡುಗಡೆಗೊಳಿಸಲಾಗಿದೆ.
ಇದೀಗ ‘ನನ್ನ ಪತಿ ಹಿಂದೂ ಹಾಗಾಗಿ ನಾನೂ ಕೂಡ ಹಿಂದೂ, ಭಾರತ ಈಗ ನನ್ನ ದೇಶ’ ಎಂದು ಸೀಮಾ ಸಂಸತಸದಿಂದ ಹೇಳಿದ್ದಾರೆ. ಕೊರೊನಾ ವೇಳೆ ಇಬ್ಬರ ಭೇಟಿಯಾಗಿದ್ದು, ಬಳಿಕ ಪ್ರೀತಿಯಲ್ಲಿ ಬಿದ್ದಿದ್ದರು. ಮಾರ್ಚ್ನಲ್ಲಿ ಮೊದಲ ಬಾರಿಗೆ ನೇಪಾಳದಲ್ಲಿ ಇಬ್ಬರೂ ಭೇಟಿಯಾಗಿ ಮದುವೆಯಾಗಿದ್ದರು.
ಸೀಮಾ ಅವರ ದಾಂಪತ್ಯ ಜೀವನ ಸುಖಮಯವಾಗಿರಲಿಲ್ಲ. ಹಾಗಾಗಿ ಪತಿಯಿಂದ ದೂರ ಇದ್ದಳು. ಆದರೆ ಆಕೆ ಮೇ 13ಕ್ಕೆ ನೋಯ್ಡಾಕ್ಕೆ ಬಂದಿದ್ದು, ಆಗ ಸಚಿನ್ ಆಕೆ ಮತ್ತು ಮಕ್ಕಳಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದ.ಆಕೆ ಪಾಕಿಸ್ತಾನದವಳು ಎನ್ನುವ ಸಂಗತಿಯನ್ನು ಬಿಚ್ಚಿಟ್ಟಿರಲಿಲ್ಲ.
ಜುಲೈ 4 ರಂದು ಇಬ್ಬರನ್ನೂ ಪೊಲೀಸರು ಬಂಧಿಸಿದ್ದರು, ಈಗ ಇಬ್ಬರಿಗೂ ಜಾಮೀನು ಸಿಕ್ಕಿದೆ.
ಈ ನಡುವೆಯೇ ಆಕೆಯ ಮೊದಲ ಪತಿ ಗುಲಾಬ್ ಹೈದರ್ ಸೌದಿ ಅರೇಬಿಯಾದಿಂದ ವಿಡಿಯೋ ಮೆಸೇಜ್ ಒಂದನ್ನು ಕಳುಹಿಸಿದ್ದು, ಆಕೆಯನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸುವಂತೆ ಮೋದಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದರೆ ವಾಪಸ್ ಹೋದರೆ ತನ್ನ ಹಾಗೂ ಮಕ್ಕಳ ಜೀವಕ್ಕೆ ಅಪಾಯವಿದೆ ನಾನು ಹೋಗುವುದಿಲ್ಲ ಸಚಿನ್ ಜತೆಯೇ ಬದುಕುತ್ತೇನೆ ಎಂದು ಸೀಮಾ ಹೈದರ್ ಹೇಳಿದ್ದಾರೆ.