ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಕಸವಿಲೇವಾರಿ ಘಟಕಗಳನ್ನು ಪರಿಶೀಲಿಸಲು ತೆರಳಿದ್ದ ಡಿಸಿಎಂ ಡಿ.ಕೆ ಶಿವಕುಮಾರ್, ದಿಢೀರ್ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಸಾರ್ಜನಿಕರ ಜೊತೆಗೆ ಉಪಹಾರ ಸೇವಿಸಿದ್ದಾರೆ.
ಬೆಂಗಳೂರಿನ ಸದಾಶಿವ ನಗರದ ಮನೆಯಿಂದ ಹೊರಟ ಡಿ ಕೆ ಶಿವಕುಮಾರ್, ಮೊದಲು ಕನ್ನಳ್ಳಿ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ್ದರು. ಈ ವೇಳೆ ಚೊಕ್ಕಸಂದ್ರದ ಇಂದಿರಾ ಕ್ಯಾಂಟಿನ್ ಗೆ ಭೇಟಿ ನೀಡಿದ್ದರು. ಈ ಸಂದರ್ಭ ಅವರು, ಸಿಬ್ಬಂದಿ ಬಳಿ ತಿಂಡಿ ಕೊಡಿ ಎಂದು ಕೇಳಿದ್ದು, ಖಾಲಿ ಆಗಿದೆ ಎಂದು ತಿಳಿದುಬಂದಿದೆ. ತಿಂಡಿ ಖಾಲಿಯಾಗಿದ್ದರಿಂದ ಡಿ.ಕೆ ಶಿವಕುಮಾರ್, ದಾಸರಹಳ್ಳಿ ಇಂದಿರಾ ಕ್ಯಾಂಟಿನ್ಗೆ ಅವರು ಭೇಟಿ ನೀಡಿದ್ದಾರೆ. ಈ ಸಂದರ್ಭ ಕ್ಯಾಂಟಿನ್ ಸಿಬ್ಬಂದಿ ಉಪ್ಪಿಟ್ಟು, ಕೇಸರಿಬಾತ್ ನೀಡಿದ್ದು ಅದನ್ನು ಸವಿದಿದ್ದಾರೆ.