ಹೊಸದಿಗಂತ ವರದಿ ಹುಬ್ಬಳ್ಳಿ:
ಅಮರನಾಥ ಯಾತ್ರೆ ತೆರಳಿದವರ ಸುರಕ್ಷಿತವಾಗಿ ಕರೆತರುವ ಪ್ರಯತ್ನ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಮರನಾಥದಲ್ಲಿ ವಿಪರೀತಿ ಮಳೆ ಹಾಗೂ ಹಿಮ ಬಿಳುವುದರಿಂದ ಕರ್ನಾಟಕ ಮೂಲದ 80 ಜನ ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಈಗಾಗಲೇ ಲೆಫ್ಟಿನೆಂಟ್ ಗೌವರ್ನರ್ ಕಚೇರಿಗೆ ಕರೆ ಮಾಡಿ ಯಾತ್ರಿಗಳ ರಕ್ಷಿಸಲು ಸೂಚಿಸಿದ್ದೇನೆ ಎಂದರು.
ಸಿಎಂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ರಕ್ಷಣೆ ಮಾಡೋದಾಗಿ ಭರವಸೆ ನೀಡಿದ್ದು, ಸಂಪೂರ್ಣ ಪ್ರಯತ್ನ ಮಾಡುತ್ತಿದ್ದೇವೆ. ಕೇವಲ ಬಿಜೆಪಿ ಅವರಷ್ಟೇ ಅಲ್ಲ ಎಲ್ಲರ ರಕ್ಷಣೆ ನಮ್ಮ ಹೊಣೆ ಎಂದು ತಿಳಿಸಿದರು.