ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಬಿಜೆಪಿ ಪಕ್ಷದ ನಾಯಕಿ ರಜನಿ ದುಗ್ಗಣ್ಣ(64) ಇಂದು ನಿಧನ ಹೊಂದಿದ್ದಾರೆ.
ಭಾರತೀಯ ಜನತಾ ಪಕ್ಷ, ಹಿಂದು ಪರ ಸಂಘಟನೆ,ಮಹಿಳಾ ಸಂಘಟನೆ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶ್ರೀ ಶಾರದಾ ಮಾತೃ ಮಂಡಳಿಯಲ್ಲಿ ಸಕ್ರಿಯವಾಗಿ ಸಂಘಟನಾತ್ಮಕ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.
ಸುರತ್ಕಲ್ ಪುರಸಭೆಯ ಸದಸ್ಯರಾಗಿ, ಎಪಿಎಂಸಿ ಮಂಗಳೂರು ಇದರ ಉಪಾಧ್ಯಕ್ಷರಾಗಿ ಮೂರು ಬಾರಿ ಮನಪಾ ಸದಸ್ಯರಾಗಿ ಹಾಗೂ ಉಪಮೇಯರಾಗಿ ಮೇಯರ್ ಆಗಿ ಮಂಗಳೂರು ನಗರದ ವಿವಿಧ ಅಭಿವೃದ್ಧಿ ಜನಪರ ಕಾರ್ಯಕ್ರಮಗಳಲ್ಲಿ ಮೂಲಕ ಜನಮನ್ನಣೆ ಪಡೆದಿದ್ದರು.
ಪುತ್ರ, ಮೂವರು ಪುತ್ರಿಯನ್ನು ಅಗಲಿದ್ದಾರೆ
ರಜನಿ ದುಗ್ಗಣ್ಣ ಅವರ ನಿಧನಕ್ಕೆ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕ ಡಾ. ವೈ. ಭರತ್ ಶೆಟ್ಟಿ ಸಹಿತ ವಿವಿಧ ಜನಪ್ರತಿನಿಧಿಗಳು ಸಂತಾಪ ವ್ಯಕ್ತ ಪಡಿಸಿದ್ದಾರೆ.