ಹೊಸದಿಗಂತ ವರದಿ, ವಿಜಯಪುರ
ಪೆನ್ ಡ್ರೈವ್ ಒಳಗೆ ಸತ್ಯವಾದದ್ದು ಇದ್ದರೆ ತನಿಖೆ ಮಾಡಬೇಕಾಗತ್ತದೆ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.
ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಮುಳವಾಡ ಗ್ರಾಮದಲ್ಲಿ ಮಾತನಾಡಿದ ಅವರು, ಎಚ್.ಡಿ. ಕುಮಾರಸ್ವಾಮಿ ಬಿಡುಗಡೆ ಮಾಡುವ ಪೆನ್ ಡ್ರೈವ್ ಬಗ್ಗೆ ತನಿಖೆ ಮಾಡಬೇಕಾಗುತ್ತದೆ. ಪೆನ್ ಡ್ರೈವ್‌ನಲ್ಲಿರುವ ಸತ್ಯಾಸತ್ಯತೆ ತಿಳಿದುಕೊಳ್ಳಬೇಕಾಗುತ್ತದೆ. ವೈಸ್ ಡಿಟೆಕ್ಷನ್ ಸರಿಯಾಗಿದೆಯಾ ಎನ್ನೊದನ್ನ ಕೇಳ್ಬೇಕಾಗುತ್ತೆ ಎಂದರು.
ಇನ್ನೂ ಈಗೆಲ್ಲ ಮಿಮಿಕ್ರಿ ಬೇರೆ ಮಾಡ್ತಾರೆ. ಯಾರು ಮಾತನಾಡಿದ್ದಾರೆ, ಯಾವ ಸಂದರ್ಭದಲ್ಲಿ ಮಾತನಾಡಿದ್ದಾರೆ ಎಲ್ಲವು ಕೂಡ ತನಿಖೆಯಾಗಬೇಕಾಗತ್ತದೆ. ಹೀಗಾಗಿ ಎಚ್’ಡಿಕೆ ಪೆನ್ ಟ್ರೈವ್ ಬಿಡುಗಡೆ ಮಾಡಿದಾಗ ಅದಕ್ಕೆ ಉತ್ತರ ಕೊಡುತ್ತೇವೆ ಎಂದರು.