ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಮಕುಮಾರ ನಂದಿ ಮಹಾರಾಜ ಹತ್ಯೆ ನಡೆದಿದ್ದು,ಇದು ಇತಿಹಾಸದಲೇ ಕ್ರೂರ ಘಟನೆಯಾಗಿದೆ. ಈ ಮುನಿಗಳ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ನೀಡಿದಾಗ ಮಾತ್ರ ಸಂಪೂರ್ಣ ಸತ್ಯ ಹೊರಬರುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯ ವರೂರು ಆಶ್ರಮದ ಗುಣಧರನಂದಿ ಮಹಾರಾಜ್ ಜೈನಮುನಿಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿಯ ಹಿರೇಕೋಡಿ ಆಶ್ರಮದ ಜೈನಮುನಿಗಳಿಗೆ ವಿದ್ಯುತ್ ಶಾಕ್ ಕೊಟ್ಟು, ಕೈ-ಕಾಲು ಕತ್ತರಿಸಿ ಬೋರ್‌ವೆಲ್‌ನಲ್ಲಿ ಹಾಕಿದ್ದಾರೆ. ಜೈನ ಸನ್ಯಾಸಿಗಳು ಕಾಲ್ನಡಿಗೆ ನಡೀತಾರೆ ಸರ್ವಸಂಗ ಪರೀತ್ಯಾಗ ಮಾಡ್ತಾರೆ. ಅವರನ್ನು ಹತ್ಯೆ ಮಾಡಿದ್ದು ಹೇಯ ಕೃತ್ಯವಾಗಿದೆ. ಇನ್ನು ಜೈನಮುನಿಗಳು ಕಾಣೆಯಾಗಿದ್ದಾರೆ ಅಂದಮೇಲೂ ರಾಜ್ಯ ಸರ್ಕಾರ ಗಂಭೀರವಾಗಿ ತೆಗದುಕೊಂಡಿಲ್ಲ. ಪ್ರತಿಭಟನೆ ಮಾಡ್ತೀನಿ ಅಂದಾಗ ಗಂಭೀರವಾಗಿ ತೆಗೆದುಕೊಂಡರು ಎಂದು ಕಿಡಿಕಾರಿದರು.
ಜೈನಮುನಿಗಳು ಕಟ್ಟಡ ಕಟ್ಟಲು ದುಡ್ಡು ಕೊಟ್ಟಿದ್ದರು . ಆದರೆ, ಬಡ್ಡಿ ವ್ಯವಹಾರ ಮಾಡುತ್ತಿದ್ದರು ಎಂದು ಹೇಳಿಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಸರ್ಕಾರಕ್ಕೆ ಶೋಭೆ ತರುವ ಸಂಗತಿ ಅಲ್ಲ. ಇನ್ನು ಶಾಸಕ ಅಭಯ ಪಾಟೀಲ್ ಒತ್ತಾಯಿಸಿದಾಗ ಆರೋಪಿಯ ಹೆಸರು ಬಿಡುಗಡೆ ಮಾಡಿದರು. ಯಾರೇ ಮಾಡಿದರೂ ಅದು ಅಪರಾಧ. ಇದಕ್ಕೆ ಜಾತಿ ಇರಲ್ಲ. ಸರ್ಕಾರದ ನಿಲುವು ಸರಿ ಪಡಿಸಕೊಳ್ಳಬೇಕು ಎಂದು ಆಗ್ರಹಿಸಿದರು.
ಜೈನಮುನಿಗಳು ದೇಶಾದ್ಯಂತ ಪಾದಯಾತ್ರೆ ಕೈಗೊಂಡಾಗ ಭದ್ರತೆ ನೀಡುವಂತಹ ಬೇಡಿಕೆಗಳನ್ನು ಅಮಿತ್ ಶಾ ಅವರ ಗಮನಕ್ಕೆ ತರ್ತೇನೆ. ರಾಜ್ಯ ಸರ್ಕಾರಗಳು ಗಮನಕ್ಕೆ ತೆಗೆದುಕೊಳ್ಳಬೇಕು. ನಾನು ಕೇಂದ್ರ ಸರ್ಕಾರದಿಂದ ಸಂಪೂರ್ಣ ಪ್ರಯತ್ನ ಮಾಡ್ತೇವೆ. ಆಮರಣ ಉಪವಾಸ ಬೇಡ ಅಂತ ನಾನು ಮನವಿ ಮಾಡಿದ್ದೇನೆ. ಮುಂದಿನ ದಿನಗಲ್ಲಿ ನ್ಯಾಯ ಸಿಗದೇ ಇದ್ದಲ್ಲಿ ಎಲ್ಲರೂ ಕೂಡಿ ಪ್ರತಿಭಟನೆ ಮಾಡೋಣ ಎಂದರು.
.