ಹೊಸದಿಗಂತ ವರದಿ ಹುಬ್ಬಳ್ಳಿ:
ಇಲ್ಲಿಯ ಆನಂದನಗರ ಗೋಡಕೆ ಫ್ಲಾಟ್‌ನಲ್ಲಿ ಪತ್ನಿಯನ್ನು ಬರ್ಬವಾಗಿ ಕೊಲೆ ಮಾಡಿದ ಆರೋಪಿಯನ್ನು ಹಳೇ ಹುಬ್ಬಳ್ಳಿ ಪೊಲೀಸರು ಪ್ರಕರಣ ನಡೆದ ಕೆಲವೇ ಕ್ಷಣಗಳಲ್ಲಿ ಆನಂದ ನಗರದ ರಸ್ತೆಯಲ್ಲಿ ಬಂಧಿಸಿದ್ದಾರೆ.
ಮಂಜುಳಾ ಮುತ್ತಲಗಿ ಮೃತ ದುರ್ದೈವಿ. ಅವಳ ಗಂಡ ಭೀಮಪ್ಪ ಸೋಮವಾರ ಬೆಳಿಗ್ಗೆ ಕೌಟುಂಬಿಕ ಕಲಹದ ಕಾರಣ ಕೊಡಲಿಯಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ಪ್ರಾಥಮಿಕ ಮಾಹಿತಿ ಯಿಂದ ತಿಳಿದುಬಂದಿದೆ. ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆದ್ದಾರೆ.
ಆರೋಪಿ ಪರಾರಿಯಾಗುವ ಮುಂಚೆ ಆನಂದ ನಗರದ ರಸ್ತೆಯಲ್ಲಿ ಬಂಧಿಸಿದ್ದಾರೆ. ಇತ್ತೇಚೆಗೆ ಕಸಬಾ ಪೇಟ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಂತಹದೇ ಕೊಲೆ ಪ್ರಕರಣ ಮಾಸುವ ಮುನ್ನ ಇದೊಂದು ಘಟನೆ ನಡೆದಿದ್ದು, ವಾಣಿಜ್ಯ ನಗರಿ ಹುಬ್ಬಳ್ಳಿ ಜನರ ಆಂತಕಕ್ಕೆ ಕಾರಣವಾಗಿದೆ.