ದಿನಭವಿಷ್ಯ| ದಿನದ ಆರಂಭದಲ್ಲಿ ಸಮಸ್ಯೆ ಎದುರಿಸಿದರೂ ಬಳಿಕ ಎಲ್ಲವೂ ನಿರಾಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ದಿನವಿಡೀ ಮುಖದಲ್ಲಿ ನಗು ಇರುವ ದಿನ. ಕಾರ್ಯ ಸಿದ್ಧಿ.ಆರ್ಥಿಕ ಉನ್ನತಿ.  ಸಾಧನೆಗೆ ಪ್ರಶಂಸೆ. ಕೌಟುಂಬಿಕ ಬಿಕ್ಕಟ್ಟು ಪರಿಹಾರ. ಒಟ್ಟಿನಲ್ಲಿ ಹರ್ಷದ ದಿನ.

ವೃಷಭ
ದಿನದ ಆರಂಭದಲ್ಲಿ ಸಮಸ್ಯೆ ಎದುರಿಸಿದರೂ ಬಳಿಕ ಎಲ್ಲವೂ ನಿರಾಳ. ಆತ್ಮೀಯ ಭಾವನೆಗಳನ್ನು ಹಂಚಿಕೊಂಡಲ್ಲಿ ಸಕಾರಾತ್ಮಕ ಸ್ಪಂದನೆ ದೊರಕಲಿದೆ.

ಮಿಥುನ
ಹಣದ ವ್ಯವಹಾರ ಎಚ್ಚರಿಕೆಯಿಂದ ನಿಭಾಯಿಸಿ. ಪ್ರಮಾದ ಆಗದಂತೆ ನೋಡಿಕೊಳ್ಳಿ. ಕೆಲವು ಬದಲಾವಣೆ ಮನಸ್ಸಿನ ಒತ್ತಡ ಹೆಚ್ಚಿಸುವುದು.

ಕಟಕ
ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಹೋಗುವಿರಿ. ಇದರಿಂದ ಕಾರ್ಯ ಸಾಧನೆ. ಕೌಟುಂಬಿಕ ಬಿಕ್ಕಟ್ಟು ಮೂಡಿದರೂ ಹೆಚ್ಚು ಸಮಸ್ಯೆ ಸೃಷ್ಟಿಸದು.

ಸಿಂಹ
ಅತಿಯಾದ ಕೆಲಸದ ಒತ್ತಡ. ವೃತ್ತಿಯಲ್ಲೂ ಖಾಸಗಿ ವಿಷಯದಲ್ಲೂ ಸವಾಲು ಎದುರಿಸುವಿರಿ. ವಾಗ್ವದ, ಸಂಘರ್ಷ ನಡೆದೀತು. ಸಂಯಮ ಅತಿ ಮುಖ್ಯ.

ಕನ್ಯಾ
ನಿಮ್ಮ ಹಿತಾಸಕ್ತಿಗೆ ಹಾನಿ ತರುವಂತಹ ಬೆಳವಣಿಗೆ ಉಂಟಾದೀತು. ಸಕಾಲಿಕ ಕ್ರಮ ತೆಗೆದುಕೊಂಡರೆ ಸರಿಹೋಗುವುದು. ಆಹಾರದಲ್ಲಿ ಹಿತಮಿತ ಸಾಧಿಸಿರಿ.

ತುಲಾ
ನಿಮ್ಮ ಪಾಲಿಗೆ ಕೆಲವು ಅಪ್ರಿಯ ಬೆಳವಣಿಗೆ ಉಂಟಾದೀತು. ಸಮಾಧಾನದಿಂದ ನಿಭಾಯಿಸಿರಿ. ಕೆಲವರ ಅವಿವೇಕದ ಸಲಹೆಗೆ ಕಿವಿಗೊಡಬೇಡಿ.

ವೃಶ್ಚಿಕ
ಕುಟಂಬಸ್ಥರು ಅಥವಾ ಸ್ನೇಹಿತರು ನಿಮಗೆ ಸಂತೋಷದ ಅಚ್ಚರಿ ನೀಡಬಹುದು. ಮನಸ್ಸಿನಲ್ಲಿ ಕಾಡುತ್ತಿದ್ದ ಗೊಂದಲವೊಂದು ಇಂದು ನಿವಾರಣೆ.

ಧನು
ವೃತ್ತಿಯಲ್ಲಿ ವಿಘ್ನಗಳು. ನಿಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಅನಿರೀಕ್ಷಿತ ಖರ್ಚು ಚಿಂತೆಗೆ ಕಾರಣವಾಗುವುದು.

ಮಕರ
ಆದಾಯ ಮತ್ತು ಖರ್ಚಿನ ಮಧ್ಯೆ ಸಮತೋಲನ ಸಾಧಿಸಿ. ಅನವಶ್ಯ ವೆಚ್ಚ ನಿಯಂತ್ರಿಸಿ. ಹೆತ್ತವರಿಗೆ ಮಕ್ಕಳ ಕುರಿತಂತೆ ಚಿಂತೆಯ ಬೆಳವಣಿಗೆ.

ಕುಂಭ
ಆತ್ಮೀಯ ಸಂಬಂಧ ಕೆಡಬಹುದು. ನಿಮ್ಮ ನಡೆನುಡಿಯೂ ಅದಕ್ಕೆ ಕಾರಣವಾದೀತು. ವೃತ್ತಿಯಲ್ಲಿ ಅಹಿತಕರ ಬೆಳವಣಿಗೆ. ಸಂಯಮ ಕಾಯ್ದುಕೊಳ್ಳಿ.

ಮೀನ
ಅಸಿಡಿಟಿಯಂತಹ ಸಮಸ್ಯೆ ಉಂಟಾದೀತು. ಆಹಾರದಲ್ಲಿ ಪಥ್ಯ ಅಗತ್ಯ. ಆರ್ಥಿಕ ಸ್ಥಿತಿ ಸಮಾಧಾನಕರ. ಕೌಟುಂಬಿಕ ಒಗ್ಗಟ್ಟು ಕಾಯ್ದುಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!