ಈಡೇರದ ಆಸೆ: ತಂದೆ ಭೇಟಿಗೆಂದು ಕೇರಳಕ್ಕೆ ತೆರಳಿ ಆಸ್ಪತ್ರೆಗೆ ಸೇರಿದ ಮದನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

2008ರ ಬೆಂಗಳೂರು ಸರಣಿ ಬಾಂಬ್ (2008 Bengaluru Serial Blasts) ಸ್ಪೋಟದ ಆರೋಪಿ ಅಬ್ದುಲ್ ನಾಸೀರ್ ಮದನಿ (Abdul Nasser Madani) ತನ್ನ ತಂದೆ ಭೇಟಿಗಾಗಿ ಕೇರಳ ತೆರಳಿದ್ದು, ಇದೀಗ ಮರಳಿದ್ದಾರೆ.

ಸುಪ್ರೀಂ ಕೋರ್ಟ್‌ನಿಂದ (Supreme Court) ಪೆರೋಲ್‌ ಪಡೆದು ಜೂನ್‌ 26ರಂದು ಕೇರಳಕ್ಕೆ ತೆರಳಿದ್ದ ಮದನಿ ಮರಳಿದ್ದು,ಆದ್ರೆ ಕೇರಳ ತಲುಪಿದ್ದ ಬಳಿಕ ಖುದ್ದು ಮದನಿಯ ಬಿಪಿ ಜಾಸ್ತಿಯಾಗಿ ಅಸ್ವಸ್ಥನಾಗಿದ್ದರು. ನಂತರ ಕೇರಳ ಆಸ್ಪತ್ರೆಗೆ ದಾಖಲಿಸಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ತಂದೆ ವಾಸವಿದ್ದ ಸುಮಾರು 30 ಕಿ.ಮೀ. ದೂರದ ಊರಿನಲ್ಲಿ ಮದನಿ ಆಸ್ಪತ್ರೆಗೆ ದಾಖಲಾಗಿದ್ದರು.

ಜುಲೈ 7 ರವರೆಗೆ ಮದನಿ ಕೇರಳದಲ್ಲಿ (Kerala) ಇರಬೇಕಿತ್ತು. ಆರೋಗ್ಯ ಕೈಕೊಟ್ಟ ಹಿನ್ನೆಲೆಯಲ್ಲಿ ತಂದೆಯನ್ನು ಮದನಿಗೆ ನೋಡಲು ಸಾಧ್ಯವಾಗಲಿಲ್ಲ. ಜುಲೈ ಏಳರವರೆಗೂ ಅಸ್ಪತ್ರೆಯಲ್ಲೇ ಇದ್ದ ಮದನಿಯ ಗಡುವು ಅಂತ್ಯವಾದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಬೆಂಗಳೂರಿಗೆ ವಾಪಸ್ ಕರೆತರಲಾಗಿದೆ. 12 ದಿನದ ಸಿಬ್ಬಂದಿ ಖರ್ಚು ವೆಚ್ಚ ಹಾಗೂ ಸರ್ವೀಸ್ ಶುಲ್ಕಕ್ಕಾಗಿ 6,76,101 ರೂ. ಹಣವನ್ನು ಮದನಿ ಪಾವತಿಸಿದ್ದನು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!