ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜೈಲು ಪಾಲಾಗಿರುವ ಆಮ್ ಆದ್ಮಿ ಪಕ್ಷದ ಮುಖಂಡ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ದೆಹಲಿ ಹೈ ಕೋರ್ಟ್ ಮತ್ತೆ ವಜಾಗೊಳಿಸಿ ಆದೇಶ ಮಾಡಿದೆ.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ದಿನೇಶ್ ಕುಮಾರ್ ಮನೀಶ್ ಸಿಸೋಡಿಯ ಜಾಮೀನು ಪಡೆಯುವಲ್ಲಿ ಅರ್ಹರಲ್ಲ ಎಂದು ವಜಾ ಮಾಡಿದ್ದಾರೆ.
ಸಿಬಿಐ ಮನೀಶ್ ಸಿಸೋಡಿಯ ಅವರನ್ನು ಫೆಬ್ರುವರಿ 26 ರಂದು ಬಂಧಿಸಿತ್ತು. ಅಲ್ಲದೆ ಅಕ್ರಮ ಹಣ ವರ್ಗಾವಣೆ ಸಂಬಂಧ ಅಭಿಷೇಕ್ ಬೋಯಿಂಗಪಲ್ಲಿ, ವಿನೋಯಿತ್ ಬಾಬು ಮತ್ತು ವಿಜಯ್ ಎಂಬುವವರ ಜಾಮೀನು ಕೂಡ ವಜಾ ಮಾಡಿದೆ.