ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಪಾಕ್ ಧ್ವಜ ಹಾರಾಡುತ್ತಿದೆ: ಯತ್ನಾಳ್ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದಲ್ಲಿ ಇಂದು ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಪಾಕಿಸ್ತಾನದ ಧ್ವಜ ಹಾರಾಡುತ್ತಿದೆ. ಹಿಂದುಗಳ ಹತ್ಯೆ ಹತ್ಯೆ ನಡೆಯುತ್ತಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಕಿಡಿಕಾರಿದ್ದಾರೆ.

ವಿಧಾನಸಭೆಯಲ್ಲಿ (Vidhanasabha Session) ಮಾತನಾಡಿದ ಅವರು, ಈ ಸರ್ಕಾರ ಬಂದ್ಮೇಲೆ ಹಿಂದುಗಳ ಕೊಲೆ ನಡೆಯುತ್ತಿದೆ. ಟೀ.ನರಸೀಪುರದಲ್ಲಿ ಹನುಮಜಯಂತಿ ವಿಚಾರದಲ್ಲಿ ಯುವ ಬ್ರಿಗೇಡ್ (Yuvara Brigade) ಯುವಕನ ಕೊಲೆ ಆಗಿದೆ. ಈ ಸರ್ಕಾರ ಬಂದ್ಮೇಲೆ ಪಾಕಿಸ್ತಾನ ಬಾವುಟ (Pakistan Flag) ಹಾರಾಡ್ತಿದೆ ಎಂದಾಗ ಕಾಂಗ್ರೆಸ್ ಶಾಸಕರು ಆಕ್ರೋಶ ಹೊರಹಾಕಿದ್ದಾರೆ.

ಜೈನ ಮುನಿಗಳು ಎಲ್ಲವನ್ನೂ ತ್ಯಾಗ ಮಾಡ್ತಾರೆ ಇಂತಹವರ ಹತ್ಯೆಯಿಂದ ರಾಜ್ಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.ರಾಜ್ಯಕ್ಕೆ ಮುನಿಗಳ ಹತ್ಯೆ ಕಳಂಕವಾಗಿದೆ. ಈ ಹತ್ಯೆ ಹಿಂದೆ ಹಲವು ಅನುಮಾನಗಳಿದ್ದಾವೆ. ಬೆಂಗಳೂರಿನಿಂದ ಪೊಲೀಸರ ಮೇಲೆ ಏನ್ ಒತ್ತಡ ಬಂದಿದೇಯೋ? ಪೊಲೀಸರ ಮೇಲೆ ಒತ್ತಡ ಬರುತ್ತೆ. ಬೆಳಗ್ಗೆ ಚೆನ್ನಾಗಿ ಇರುತ್ತಾರೆ, ರಾತ್ರಿ ಒಳಗಾಗಿ ಪೊಲೀಸರು ಬದಲಾಗ್ತಾರೆ ಎಂದರು.

ರಾಜ್ಯದ ಪೊಲೀಸರ ಮೇಲೆ ಭರವಸೆ ಇಲ್ಲ. ಸಿಬಿಐ ತನಿಖೆಗೆ (CBI Investigation) ಈ ಕೇಸ್ ಕೊಡಬೇಕು. ಒಂದು ಕೋಮಿನ ತೃಪ್ತಿಪಡಿಸುವ ಕೆಲಸ ಆಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಒಂದು ಸಂತಾಪವನ್ನ ಕೂಡ ಹೇಳಲಿಲ್ಲ. ಬೇರೆ ಯಾರಾದರೂ ಸತ್ತಿದ್ರೆ ಸಂತಾಪ ಸೂಚಿಸುತ್ತಿದ್ದರು ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!