ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಭಾರತದಲ್ಲಿ ಹಲವು ದಿನಗಳಿಂದ ಮಳೆಯ ರೌದ್ರನರ್ತನ ಆರಂಭವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮುಂಗಾರು ಮಳೆಯ ಆರ್ಭಟಕ್ಕೆ ಪೂರ್ವ ಮತ್ತು ಮಧ್ಯ ರಾಜಸ್ಥಾನದಲ್ಲಿ ಭಾರೀ ಮಳೆಯಾಗುತ್ತಿದೆ, ಮಹಾಮಳೆಗೆ ಈವರೆಗೂ ಏಳು ಮಂದಿ ಮೃತಪಟ್ಟಿದ್ದಾರೆ.
ರಾಜಸ್ಥಾನದ ರಸ್ತೆಗಳು, ರೈಲು ಹಳಿಗಳು ಹಾಗೂ ತಗ್ಗು ಪ್ರದೇಶದ ವಸತಿ ಗೃಹಗಳಿಗೆ ನೀರು ನುಗ್ಗಿದ್ದು, ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಇಂದು ಕೂಡ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಅಜ್ಮೇರ್‌ನಲ್ಲಿ ಮೂವರು, ನಾಗೌರ್‌ನಲ್ಲಿ ಇಬ್ಬರು, ಟೋಂಕ್‌ನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಇನ್ನು ಜೈಪುರದಲ್ಲಿ ತುಂಬಿ ಹರಿಯುತ್ತಿದ್ದ ಚರಂಡಿ ನೀರಿನ ರಭಸಕ್ಕೆ ಏಳು ವರ್ಷದ ಬಾಲಕ ಕೊಚ್ಚಿ ಹೋಗಿ ಮೃತಪಟ್ಟಿದ್ದಾನೆ.