ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಮೋಸಾ ಆರ್ಡರ್ ಮಾಡಿದ್ದಕ್ಕೆ ಲಕ್ಷ ರೂಪಾಯಿ ಹಣ ವೈದ್ಯರೊಬ್ಬರಿಗೆ ದುಷ್ಕರ್ಮಿಗಳು ದೋಖಾ ಹಾಕಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. 25 ಪ್ಲೇಟ್ ಸಮೋಸಾ ವಿಚಾರದಲ್ಲಿ ರೂ.1.40 ಲಕ್ಷ ವಂಚಿಸಿದ್ದಾರೆ. ಕೆಇಎಂ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಡಾ.ಬೋಯಿವಾಲಾ ಆನ್‌ಲೈನ್‌ನಲ್ಲಿ ಸಮೋಸಾ ಆರ್ಡರ್ ಮಾಡಿದ್ದಾರೆ. 25 ಪ್ಲೇಟ್ ಸಮೋಸಾ ವಿಚಾರದಲ್ಲಿ 1.40 ಲಕ್ಷ ರೂಪಾಯಿ ನಷ್ಟವಾಗುವ ನಿರೀಕ್ಷೆ ಇರಲಿಲ್ಲ ಅಂತಿದಾರೆ ವೈದ್ಯರು.
ಶನಿವಾರ ತನ್ನ ಸ್ನೇಹಿತರೊಂದಿಗೆ ಕರ್ಜತ್‌ಗೆ ಪ್ರವಾಸಕ್ಕೆ ಯೋಜಿಸಿದ್ದರು. ಅದಕ್ಕಾಗಿಯೇ ಪ್ರಯಾಣ ಮಾಡುವಾಗ ಏನಾದರೂ ತಿನ್ನಲು ಬೇಕಾಗುತ್ತೆ ಎಂದು ಗುರುಕೃಪಾ ರೆಸ್ಟೋರೆಂಟ್ ಗೆ ಕರೆ ಮಾಡಿ 25 ಪ್ಲೇಟ್ ಸಮೋಸಾ ಆರ್ಡರ್ ಮಾಡಿದ್ದಾರೆ. 1500 ರೂಪಾಯಿ ಕೊಡುವಂತೆ ಫೋನ್ ಮೂಲಕ ಕೇಳಿದರು. ವೈದ್ಯರು ಹೇಳಿದ ನಂಬರ್‌ಗೆ 1500 ರೂ. ಹಣ ಹಾಕಿದ್ದರೂ ನಿಮ್ಮ ಪಾವತಿ ನಮಗೆ ಬಂದಿಲ್ಲ ಎಂದು ಕರೆ ಬಂದಿದೆ.
ಇನ್ನೊಂದು ನಂಬರ್‌ಗೆ ಪಾವತಿ ಮಾಡುವಂತೆ ಹೇಳಿ ಪಾವತಿ ವಿನಂತಿಯ ಲಿಂಕ್ ಅನ್ನು ವೈದ್ಯರಿಗೆ ಕಳುಹಿಸಿದರು. ವೈದ್ಯರು ಪಾವತಿಸಿದ ತಕ್ಷಣ ಅವರ ಖಾತೆಯಿಂದ ಮೊದಲ ಬಾರಿಗೆ 28 ಸಾವಿರ ರೂ.ಡೆಬಿಟ್ ಆಗಿದೆ. ಇದನ್ನು ನೋಡುತ್ತಿದ್ದಂತೆಯೇ ಇನ್ನೂ ಎರಡು ಮೂರು ಸಂದೇಶಗಳು ಅವರ ಖಾತೆಯಿಂದ ಹೆಚ್ಚಿನ ಹಣ ಡ್ರಾ ಆಗಿರುವುದಾಗಿ ತೋರಿಸಿದೆ. ತಕ್ಷಣ ವೈದ್ಯರು ಅವರ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಖದೀಮರು ಆತನ ಖಾತೆಯಿಂದ 1.40 ಲಕ್ಷ ರೂ. ಹಣ ಎಗರಿಸಿದ್ದರು. ಬೇರೆ ದಾರಿಯಿಲ್ಲದೆ ವೈದ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.