ಕಾಲ ಬದಲಾಗಿ ಮಳೆ ಶುರುವಾಗಿದೆ, ಹೊರಗೆ ಹೋಗೋಕೂ ಕಷ್ಟಪಡುವಂತಾಗಿದೆ, ಒಂದು ದಿನ ಹೊರಗೆ ಹೋಗಿ ಬಂದರೂ ಶೀತ, ಜ್ವರ, ಕೆಮ್ಮು ಬರುತ್ತದೆ, ಇದಕ್ಕೆಂದು ದಿನಗಟ್ಟಲೆ ರೆಸ್ಟ್ ಮಾಡಿದ್ರೂ ಆರೋಗ್ಯ ಮತ್ತೆ ಯಥಾಸ್ಥಿತಿಗೆ ಬರೋಕೆ ಸಾಕಷ್ಟು ಸಮಯ ಬೇಕಿದೆ. ಮಳೆ ಇದೆ ಎಂದು ಮನೇಲೇ ಕೂರೋಕಾಗೋದಿಲ್ಲ, ಆಗೋ ಕೆಲಸ ಆಗಲೇಬೇಕು, ಮಳೆಗಾಲದಲ್ಲಿ ನಿಮ್ಮ ಇಮ್ಯುನಿಟಿ ಎಷ್ಟು ಗಟ್ಟಿ ಇದ್ದರೆ ಅಷ್ಟು ಒಳ್ಳೆಯದು, ಇಮ್ಯುನಿಟಿ ಹೆಚ್ಚಾಗೋಕೆ ಹೀಗೆ ಮಾಡಿ..
ಆರೋಗ್ಯಕರ ಡಯಟ್ ನಿಮ್ಮದಾಗಿರಲಿ, ಬ್ಯಾಲೆನ್ಸ್ ಆಗಿರುವ ಆಹಾರ ಸೇವಿಸಿ, ಹಣ್ಣು ತರಕಾರಿ, ವಿಟಮಿನ್ಸ್, ಮಿನರಲ್ಸ್, ಆಂಟಿಆಕ್ಸಿಡೆಂಟ್ಸ್ ಎಲ್ಲವೂ ಸಿಗಲಿ.
ಮಳೆ ಇದೆ, ನೀರು ಕುಡಿಯೋದು ಸ್ವಲ್ಪ ಕಮ್ಮಿ ಆದ್ರೂ ಒಕೆ ಅನ್ನೋ ಭಾವನೆ ಬಿಟ್ಟುಬಿಡಿ, ದೇಹಕ್ಕೆ ನೀರು ಸದಾ ಬೇಕು, ಚೆನ್ನಾಗಿ ನೀರು ಕುಡಿಯಿರಿ.
ಈಗೇನು ವ್ಯಾಯಾಮದ ಅವಶ್ಯಕತೆ ಇಲ್ಲ ಅಂತಲೋ ಬೆಳಗ್ಗೆ ಬೇಗ ಏಳೋಕೆ ಆಗೋದಿಲ್ಲ ಅಂತಲೋ ವ್ಯಾಯಾಮಕ್ಕೆ ಕತ್ತರಿ ಹಾಕ್ಬೇಡಿ, ಯೋಗ, ಧ್ಯಾನ, ವ್ಯಾಯಾಮ ಯಾವಾಗಲೂ ಬೇಕು.
ಚೆನ್ನಾಗಿ ನಿದ್ದೆ ಮಾಡಿ, ಹೌದು, ಇದನ್ನು ನೀವು ಮುಖ್ಯವಾದ ವಿಷಯ ಅಂತ ಅಂದುಕೊಳ್ಳದೇ ಇರಬಹುದು, ಆದರೆ ನಿಮ್ಮ ಮೆದುಳಿಗೆ ಸಾಕಷ್ಟು ಆಯಾಸ ಆಗಿರುತ್ತದೆ. ಅದಕ್ಕೂ ರೆಸ್ಟ್ ಬೇಕಲ್ವಾ? ಏಳರಿಂದ-ಎಂಟು ಗಂಟೆ ನಿದ್ದೆ ಮಾಡಲೇಬೇಕು.
ಯಾವ ಯಾವ ಆಹಾರ ಪದಾರ್ಥಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ?
ಸಿಟ್ರಸ್ ಫ್ರೂಟ್ಸ್= ಕಿತ್ತಳೆ, ನಿಂಬು, ದ್ರಾಕ್ಷಿ, ಮೂಸಂಬಿ
ಶುಂಠಿ- ಬೆಳ್ಳುಳ್ಳಿ
ಅರಿಶಿಣ
ಮೊಸರು
ಮೊಟ್ಟೆ
ಮಶ್ರೂಮ್
ಕಾಳುಮೆಣಸು
ತುಳಸಿ
ದಪ್ಪ ಮೆಣಸು
ಹಸಿರು ತರಕಾರಿ
ಟೊಮ್ಯಾಟೊ
ಡ್ರೈ ಫ್ರೂಟ್ಸ್