ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮನ್ನಾ ಇಂಡಸ್ಟ್ರಿಗೆ ಎಂಟ್ರಿಯಾಗಿ 17 ವರ್ಷಗಳೇ ಕಳೆದಿವೆ, ಆದರೆ ಇನ್ನೂ ಸ್ಟಾರ್ ಹೀರೋಯಿನ್ ಆಗಿ ಸರಣಿ ಚಿತ್ರಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಅವರು ಬಾಲಿವುಡ್ ನಟ ವಿಜಯ್ ವರ್ಮಾ ಅವರನ್ನು ಪ್ರೀತಿಸುತ್ತಿರುವುದಾಗಿ ಮಾಧ್ಯಮಗಳ ಮುಂದೆ ತಮ್ಮ ಸಂಬಂಧವನ್ನು ಅಧಿಕೃತವಾಗಿ ಒಪ್ಪಿಕೊಂಡರು. ಇತ್ತೀಚೆಗೆ ಇಬ್ಬರೂ ನೆಟ್‌ಫ್ಲಿಕ್ಸ್‌ನಲ್ಲಿ ಲಸ್ಟ್ ಸ್ಟೋರೀಸ್ 2 ಅನ್ನು ಒಟ್ಟಿಗೆ ಮಾಡಿದ್ದಾರೆ.
ಸದ್ಯ ತಮನ್ನಾ ರಜನಿಕಾಂತ್ ಅವರ ಜೈಲರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ. ಇತ್ತೀಚೆಗೆ ಜೈಲರ್ ಚಿತ್ರದ ‘ಕಾವಲಯ್ಯಾ’ ಎಂಬ ಹಾಡು ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ತಮನ್ನಾ ಹಾಟ್ ಸ್ಟೆಪ್ಸ್ ಹಾಕಿದ್ದಾರೆ. ಈ ಹಾಡಿನಲ್ಲಿ ರಜನಿಕಾಂತ್ ಕೂಡ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗಿಂತ ತಮನ್ನಾ ಹಾಕಿರುವ ಸ್ಟೆಪ್ಸ್ ವೈರಲ್ ಆಗಿದೆ. ಈ ಹಾಡನ್ನು ವಿಜಯ್ ವರ್ಮಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ಈ ಹಾಡನ್ನು ಶೇರ್ ಮಾಡುತ್ತಲೇ ʻಈ ಹಾಡು ಬೆಂಕಿ..ಸಿನಿಮಾ ದೇವರು, ದೇವತೆʼ ಎಂದು ಪೋಸ್ಟ್ ಮಾಡಿದ್ದಾರೆ. ಈ ಹಾಡಿನಲ್ಲಿ ಸಿನಿಮಾ ದೇವರು ರಜನಿಕಾಂತ್ ಮತ್ತು ಸಿನಿಮಾ ದೇವತೆ ತಮನ್ನಾ ಇದ್ದಾರೆ ಎಂದು ಬರೆದುಕೊಂಡಿದ್ದಾರೆ. ಆದರೆ ಈ ಹೊಗಳಿಕೆ ಜಾಸ್ತಿ ಎಂದು ಹಲವರು ಕಮೆಂಟ್ ಮಾಡುತ್ತಿದ್ದರೆ, ಇನ್ನು ಕೆಲವರು ಗೆಳತಿಯನ್ನು ಚೆನ್ನಾಗಿ ಹೊಗಳುತ್ತಿದ್ದಾರೆ ಎಂದು ಪಾಸಿಟಿವ್ ಕಮೆಂಟ್ ಗಳನ್ನೂ ಹಾಕುತ್ತಿದ್ದಾರೆ.