ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದ ಎರಡು ತಿಂಗಳ ಹಿಂಸಾಚಾರದಲ್ಲಿ ಮಾದಕ ದ್ರವ್ಯ ಕಳ್ಳಸಾಗಣೆ ವಿಪರೀತವಾಗಿದೆ. ಅಸ್ಸಾಂ ರೈಫಲ್ಸ್ನ ಅಗರ್ತಲಾ ಸೆಕ್ಟರ್ ಶ್ರೀಕೋನಾ ಬೆಟಾಲಿಯನ್ ಸುಮಾರು 2 ಕೋಟಿ ಮೌಲ್ಯದ ಹೆರಾಯಿನ್ ಸಹಿತ ನಾಲ್ವರನ್ನು ಬಂಧಿಸಿದೆ. ಮಾದಕ ದ್ರವ್ಯ-ಭಯೋತ್ಪಾದನೆ ವಿರುದ್ಧ ನಡೆಯುತ್ತಿರುವ ಅಭಿಯಾನದ ಭಾಗವಾಗಿ, ಕಳ್ಳಸಾಗಣೆದಾರರನ್ನು ಕ್ಯಾಚಾರ್ ಜಿಲ್ಲೆಯ ಲಖಿಪುರ ಉಪವಿಭಾಗದಿಂದ ಬಂಧಿಸಲಾಗಿದೆ. ಕಾರ್ಯಾಚರಣೆಯಲ್ಲಿ 24 ಸೋಪ್ ಆಕಾರದ ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ. ಇವುಗಳ ಬೆಲೆ ಸುಮಾರು 2 ಕೋಟಿ ರೂಪಾಯಿ ಮೌಲ್ಯ ಬೆಲೆ ಬಾಳು ಸಾಧ್ಯತೆಯಿದೆ ಎಂದು ಡಿಆರ್ಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮೇ 3 ರಿಂದ ಈಶಾನ್ಯ ರಾಜ್ಯ ಮಣಿಪುರದಲ್ಲಿ ಶುರುವಾದ ಹಿಂಸಾಚಾರವು ಸಮಾಜದ ಪ್ರತಿಯೊಂದು ವರ್ಗದ ಮೇಲೆ ಪರಿಣಾಮ ಬೀರಿದೆ. ಕುಕಿ ಮತ್ತು ಮೈತೇಯಿ ಬುಡಕಟ್ಟು ಸಮುದಾಯಗಳ ನಡುವೆ ಪರಿಶಿಷ್ಟ ಪಂಗಡದ (ಎಸ್ಟಿ) ಸ್ಥಾನಮಾನಕ್ಕಾಗಿ ಶುರುವಾದ ಪ್ರತಿಭಟನೆ ಬೂದಿ ಮುಚ್ಚಿದ ಕೆಂಡದಂತಿದೆ. ರಾಜ್ಯದಲ್ಲಿ ಅಶಾಂತಿಯಿಂದಾಗಿ, ಕಳ್ಳಸಾಗಣೆದಾರರು ಮಣಿಪುರದಿಂದ ಅಸ್ಸಾಂಗೆ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗೋಲ್ಡನ್ ಟ್ರಯಾಂಗಲ್ ಈಶಾನ್ಯ ರಾಜ್ಯಗಳಿಗೆ ಸಮೀಪವಿರುವುದರಿಂದ ಅಲ್ಲಿ ಮಾದಕ ದ್ರವ್ಯ ಕಳ್ಳಸಾಗಣೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಗೋಲ್ಡನ್ ಟ್ರಯಾಂಗಲ್ ಎಂದರೇನು?
ಥಾಯ್ಲೆಂಡ್, ಲಾವೋಸ್, ಮ್ಯಾನ್ಮಾರ್ಗಳು ಗೋಲ್ಡನ್ ಟ್ರಯಾಂಗಲ್ ಭಾಗವಾಗಿದೆ. ಅಂದರೆ ಜಗತ್ತಿನ ಶೇ.68ರಷ್ಟು ಅಕ್ರಮ ಅಫೀಮು ಈ ದೇಶಗಳಲ್ಲಿಯೇ ಉತ್ಪಾದನೆಯಾಗುತ್ತದೆ. ಮ್ಯಾನ್ಮಾರ್ ಗಡಿಯು ಭಾರತದ ಈಶಾನ್ಯ ರಾಜ್ಯಗಳಲ್ಲಿ 1643 ಕಿ.ಮೀ. ಈ ಕಾರಣದಿಂದಲೇ ಈ ರಾಜ್ಯಗಳಲ್ಲಿ ಡ್ರಗ್ಸ್ ದಂಧೆ ವಿಪರೀತವಾಗಿ ಹೆಚ್ಚಿದೆ.