ಜೀವನದ ಬಗ್ಗೆ, ಆರೋಗ್ಯದ ಬಗ್ಗೆ ಹೆಣ್ಣುಮಕ್ಕಳು ಈ ವಿಷಯಗಳನ್ನು ತಿಳಿದಿರಬೇಕಂತೆ, ಇದರಿಂದ ಅವರಿಗೇ ಲಾಭ, ಯಾವ ವಿಷಯಗಳು ಗೊತ್ತಾ?
- ವರ್ಷಕ್ಕೊಮ್ಮೆಯಾದರೂ ಗೈನಕಾಲಜಿಸ್ಟ್ನ್ನು ಭೇಟಿ ಮಾಡಿ, ಬ್ರೆಸ್ಟ್ ಕ್ಯಾನ್ಸರ್ನಿಂದ ದೂರ ಇರೋದಕ್ಕೆ ಬ್ರೆಸ್ಟ್ ಎಕ್ಸಾಂ ಮನೆಯಲ್ಲಿಯೇ ಮಾಡಿಕೊಳ್ಳುವ ಬಗ್ಗೆ ತಿಳಿದುಕೊಳ್ಳಿ.
- ಮಕ್ಕಳು ಬೇಡ ಎಂದು ಕೆಲ ಮಹಿಳೆಯರು ನಿರ್ಧರಿಸುತ್ತಾರೆ, ಇದರಿಂದಾಗಿ ಮಕ್ಕಳ ಬೇಡ ಎಂದು ಹೇಳುವ ಮಹಿಳೆಯರು ಕೆಟ್ಟವರು ಎಂದರ್ಥ ಅಲ್ಲ, ಮದರ್ಹುಡ್ ನಿಮ್ಮ ಆಯ್ಕೆ, ಆದರೆ ನಿಮ್ಮ ಪಾರ್ಟ್ನರ್ ಜೊತೆಯೂ ಮಾತುಕತೆ ನಡೆಸಿ.
- ನಿಮ್ಮ ಯುರೇತ್ರಾದಲ್ಲಿ ಯಾವುದೇ ಬ್ಯಾಕ್ಟೀರಿಯಾ ಉಳಿಯಬಾರದು ಎಂದರೆ ಸೆಕ್ಸ್ ನಂತರ ಮೂತ್ರ ವಿಸರ್ಜನೆ ಮಾಡಿ, ಇದರಿಂದ ಸಾಕಷ್ಟು ಸೋಂಕು ನಿವಾರಣೆ ಆಗುತ್ತದೆ.
- ನೀವು ಸರಿಯಾದ ಅಳತೆಯ ಬ್ರಾ ಹಾಕ್ತಿದ್ದೀರಾ? ಸಾಕಷ್ಟು ಮಂದಿ ತಮ್ಮ ಸೈಜ್ಗೆ ತಕ್ಕ ಬ್ರಾ ಹಾಕೋದಿಲ್ಲ, ಇದು ದೇಹದ ಶೇಪ್ ಹಾಗೂ ಆರೋಗ್ಯ ಎರಡರ ಮೇಲೂ ಪರಿಣಾಮ ಬೀರುತ್ತದೆ.
- ಯಾವುದೇ ಬಟ್ಟೆ ಮೇಲೆ ಬ್ಲಡ್ ಕಲೆ ಆದರೆ ತಕ್ಷಣ ಅದನ್ನು ತಣ್ಣೀರಿನಲ್ಲಿಯೇ ತೊಳೆಯಿರಿ, ಕಲೆ ಡಲ್ ಆಗುತ್ತದೆ ನಂತರ ಮಾಮೂಲಿ ವಾಶ್ ಮಾಡಿ ಆಗ ಕಲೆ ಹೋಗುತ್ತದೆ.
- ನಿಮ್ಮ ದೇಹ ವಿಚಿತ್ರವಾಗಿಲ್ಲ, ಸಣ್ಣ, ದಪ್ಪ, ಕಪ್ಪು, ಬಿಳಿ, ಕೂದಲಿಲ್ಲ ಇವೆಲ್ಲಾ ಸಮಾಜದ ದೃಷ್ಟಿ ಅಷ್ಟೆ, ನಿಮ್ಮ ದೇಹದಲ್ಲಿ ನೀವು ಕಂಫರ್ಟ್ ಆಗಿರಿ ಸಾಕು.
- ಸೆಕ್ಸ್ ವಿಷಯವಾಗಿ ಹೆಣ್ಣುಮಕ್ಕಳು ತಮಗೇನು ಬೇಕು ಅನ್ನೋದಷ್ಟು ಸ್ಪಷ್ಟವಾಗಿ ಹೇಳುವಲ್ಲಿ ಸದಾ ಸೋಲುತ್ತಾರೆ, ನಾಚಿಕೆಯ ಗೋಡೆ ಕಟ್ಟಿಕೊಳ್ತಾರೆ. ಆದರೆ ನಿಮಗೇನು ಬೇಕು ಅನ್ನೋದನ್ನು ಹೇಳಿದ್ರೆ ನಿಮಗೆ ನಾಚಿಕೆ, ಮರ್ಯಾದಿ ಇಲ್ಲ ಎಂದರ್ಥ ಅಲ್ಲ ಅನ್ನೋದು ನೆನಪಿರಲಿ.
- ನೆನಪಿರಲಿ, ಎಲ್ಲಾದಕ್ಕೂ ನೀವು ಕ್ಷಮೆ ಕೇಳಬೇಕಾಗಿಲ್ಲ.
- ಯಾವುದಕ್ಕೂ ಯಾರ ಮೇಲೆಯೂ ಡಿಪೆಂಡ್ ಆಗಬೇಡಿ, ಇಲ್ಲಿ ಬ್ರಹ್ಮ ವಿದ್ಯೆ ಯಾವುದೂ ಇಲ್ಲ, ಕಲಿತರೆ ಎಲ್ಲವೂ ನಿಮಗೆ ತಿಳಿಯುತ್ತದೆ. ಇಂಡಿಪೆಂಡೆಂಟ್ ಆಗುವ ಖುಷಿಯನ್ನು ಒಮ್ಮೆ ಅನುಭವಿಸಿ ನೋಡಿ.
- ಕೆಟ್ಟ ಪಾರ್ಟ್ನರ್ ಸಾಂಗತ್ಯದಲ್ಲಿ ಇರೋದಕ್ಕಿಂತ ಒಬ್ಬಂಟಿಯಾಗಿರೋದು ಲೇಸು, ಸಮಾಜದ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ, ಸಮಾಜ ಕೂಡ ನಿಮ್ಮ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ, ಸುಮ್ಮನೆ ಮಾತನಾಡುತ್ತದೆ ಅಷ್ಟೆ.
- ಕೆಲವೊಮ್ಮೆ ಸೆಲ್ಫಿಶ್ ಆಗಿ ನೀವು ಕೂಡ ಮುಖ್ಯ
- ನಿಮ್ಮ ಬೆಲೆ ನಿಮಗೆ ತಿಳಿದಿರಲಿ. ನಿಮ್ಮ ಪ್ರೊಫೆಶನ್ ಬಗ್ಗೆಯೂ ಗಮನ ಇರಲಿ