ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಕಿಚ್ಚ ಸುದೀಪ್ ಮೇಲೆ ಆರೋಪಗಳನ್ನು ಹೊರಿಸಿರುವ ನಿರ್ಮಾಪಕರ ವಿರುದ್ಧ ಚಾಮರಾಜನಗರದಲ್ಲಿ ಫ್ಯಾನ್ಸ್ ಪ್ರತಿಭಟನೆ ಮಾಡಿದ್ದದಾರೆ.
ನಿರ್ಮಾಪಕರಾದ ಎ.ಗಣೇಶ್, ಪ್ರವೀಣ್ ಹಾಗೂ ಎನ್ಎಂ. ಸುರೇಶ್ ಫೋಟೊಕ್ಕೆ ಚಪ್ಪಲಿಯಿಂದ ಹೊಡೆದು ಪ್ರತಿಭಟನೆ ಮಾಡಿದ್ದಾರೆ.
ಸುದೀಪ್ ಎಂಟು ಕೋಟಿ ಅಡ್ವಾನ್ಸ್ ಪಡೆದು ಸಿನಿಮಾ ಶೂಟ್ಗೆ ಡೇಟ್ ನೀಡ್ತಿಲ್ಲ ಎಂದು ನಿರ್ಮಾಪಕರು ಆರೋಪಿಸಿದ್ದಾರೆ. ಸುದೀಪ್ ಇದಕ್ಕೆ ಸ್ಪಷ್ಟನೆ ನೀಡಿದ್ದು, ಆರೋಪಗಳೆಲ್ಲವೂ ಆಧಾರರಹಿತ ಎಂದಿದ್ದಾರೆ.