ಹೊಸದಿಗಂತ ವರದಿ ವಿಜಯಪುರ:
ಭೀಮಾತೀರದಲ್ಲಿ ಓರ್ವ ರೌಡಿ ಶೀಟರ್ ಅನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ಮಂಗಳವಾರ ನಡೆದಿದೆ.
ಆಲಮೇಲ ಪಟ್ಟಣದ ನಿವಾಸಿ ರೌಡಿ ಶೀಟರ್ ಮಾಳಪ್ಪ ಮೇತ್ರಿ ಕೊಲೆಯಾದ ವ್ಯಕ್ತಿ.
ಜಿಲ್ಲೆಯ ಭೀಮಾತೀರದ ಆಲಮೇಲ ತಾಲೂಕಿನ ದೇವರನಾವದಗಿ ಗ್ರಾಮದಲ್ಲಿ ರೌಡಿ ಶೀಟರ್ ಮಾಳಪ್ಪ ಮೇತ್ರಿಯನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆಮಾಡಿ ಓಡಿ ಹೋಗಿದ್ದು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಆಲಮೇಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.