ಟೀಮ್ ಇಂಡಿಯಾಗೆ ಕಮ್​ಬ್ಯಾಕ್​ ಆಗಲು ರೆಡಿಯಾದ ಯಾರ್ಕರ್ ಸ್ಪೆಷಲಿಸ್ಟ್​ ಜಸ್ಪ್ರೀತ್ ಬುಮ್ರಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟೀಮ್ ಇಂಡಿಯಾದ ಯಾರ್ಕರ್ ಸ್ಪೆಷಲಿಸ್ಟ್​ ಜಸ್ಪ್ರೀತ್ ಬುಮ್ರಾ, ಸದ್ಯದಲ್ಲೇ ತಂಡಕ್ಕೆ ವಾಪಸ್ಸಾಗಲಿದ್ದಾರೆ.

ಇಂಜುರಿಯಿಂದಾಗಿ ಕಳೆದೊಂದು ವರ್ಷದಿಂದತಂಡದಿಂದ ಹೊರಗುಳಿದ ಜಸ್ಪ್ರೀತ್ ಬುಮ್ರಾ ಕಮ್​ಬ್ಯಾಕ್​ಗೆ ಮುಹೂರ್ತ ನಿಗದಿಯಾಗಿದೆ.
ಕಳೆದ ವರ್ಷ ಜೂನ್​ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ್ದ ಏಕದಿನ ಪಂದ್ಯವೇ ಲಾಸ್ಟ್ ಅದಾದ ನಂತರ ಬುಮ್ರಾ ಮತ್ತೆ ಬಾಲ್​ ಮುಟ್ಟಿಲ್ಲ. ಏಷ್ಯಾಕಪ್, T20 ವಿಶ್ವಕಪ್​ ಟೂರ್ನಿಗಳಲ್ಲಿ ಬುಮ್ರಾ ಅಲಭ್ಯತೆ ತಂಡಕ್ಕೆ ಕಾಡಿತ್ತು.

ಇದೀಗ ಇಂಜುರಿಯಿಂದ ಬುಮ್ರಾ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಐರ್ಲೆಂಡ್ ವಿರುದ್ಧದ T20 ಸರಣಿ ವೇಳೆ ತಂಡಕ್ಕೆ ಕಮ್​ಬ್ಯಾಕ್ ಮಾಡಲಿದ್ದಾರೆ. ಅಲ್ಲದೇ, ಕಮ್​ಬ್ಯಾಕ್ ಸರಣಿಯಲ್ಲೇ ಬುಮ್ರಾಗೆ ನಾಯಕನ ಪಟ್ಟ ಕಟ್ಟಲು BCCI ಯೋಚಿಸ್ತಿದೆ.

ವೆಸ್ಟ್​ ಇಂಡೀಸ್​ ವಿರುದ್ಧದ T20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಯುವಪಡೆಯನ್ನ ಮುನ್ನಡೆಸಲಿದ್ದಾರೆ. ಈ ಸರಣಿ ಮುಗಿದ ಕೆಲವೇ ದಿನಗಳಲ್ಲಿ ಟೀಂ ಇಂಡಿಯಾ ಐರ್ಲೆಂಡ್​ ವಿರುದ್ಧ T20 ಸರಣಿ ಆಡಲಿದೆ.

ಹಾರ್ದಿಕ್ ಪಾಂಡ್ಯಗೆ ಐರ್ಲೆಂಡ್​ ಸರಣಿಯಿಂದ ರೆಸ್ಟ್ ನೀಡುವ ಸಾಧ್ಯತೆ ಇದೆ. ಇದರಿಂದ ಬುಮ್ರಾ ನಾಯಕತ್ವದಲ್ಲಿ IPLನಲ್ಲಿ ಮಿಂಚಿದ ಯುವ ಆಟಗಾರರಿಗೆ ಚಾನ್ಸ್ ನೀಡುವ ಪ್ಲಾನ್ BCCIನದ್ದಾಗಿದೆ. ಮತ್ತೊಂದೆಡೆ ಏಷ್ಯಾಕಪ್​ ಮತ್ತು ಏಕದಿನ ವಿಶ್ವಕಪ್​ ದೃಷ್ಟಿಯಿಂದ ಬುಮ್ರಾ ಫಿಟ್​ನೆಸ್ ಟೀಂ ಇಂಡಿಯಾಗೆ ತುಂಬಾನೇ ಅಗತ್ಯವಾಗಿದೆ. ಇದಕ್ಕಾಗಿ ಐರ್ಲೆಂಡ್​ ಸರಣಿಯಲ್ಲಿ ಬುಮ್ರಾರನ್ನ ಕಣಕ್ಕಿಳಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!