ಇಂದಿನ ರಾಜಕಾರಣ ಐಪಿಎಲ್: ಉದ್ಧವ್ ಠಾಕ್ರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂದಿನ ಭಾರತದ ರಾಜಕಾರಣವು (Indian Politics) ಐಪಿಎಲ್ ರೀತಿಯಾಗಿದೆ. ಯಾರು ಯಾವ ತಂಡದ ಪರವಾಗಿ ಆಡುತ್ತಿದ್ದಾರೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ ಎಂದು ಬಿಜೆಪಿ (BJP) ವಿರುದ್ಧ ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ (Former CM Uddhav Thackeray) ಅವರು ವಾಗ್ದಾಳಿ ನಡೆಸಿದ್ದಾರೆ.

ಇಂದು ದೇಶದ ಹಾಗೂ ಮಹಾರಾಷ್ಟ್ರದ ರಾಜಕಾರಣವು ಅತ್ಯಂತ ಕೀಳಮಟ್ಟವನ್ನು ತಲುಪಿದೆ. ಸರ್ಕಾರ ಇನ್ನೂ ಜನರ ಸಮಸ್ಯೆಗಳಿಗೆ ಕಿವಿಯಾಗುತ್ತಿಲ್ಲ. ಜನರ ಮನೆಗಳ ಬಾಗಿಲಲ್ಲಿ ಸರ್ಕಾರದ ಕಾರ್ಯಕ್ರಮಗಳಿವೆ. ಆದರೆ, ಮನೆಗಳ ಸ್ಥಿತಿ ಏನಾಗಿದೆ? ಆ ಬಗ್ಗೆ ಸರ್ಕಾರ ತಲೆಕೆಡಿಸಿಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಮಾತು ಮುಂದುವರಿಸಿ, ದೇವೇಂದ್ರ ಫಡ್ನವೀಸ್ ವಿರುದ್ಧವೂ ವಾಗ್ದಾಳಿ ನಡೆಸಿದ ಠಾಕ್ರೆ, ಈ ಹಿಂದೇ ಇದೇ ಫಡ್ನವೀಸ್ ಅವರು ಎಂದಿಗೂ ಎನ್‌ಸಿಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಅವರ ತಮ್ಮ ಮಾತನ್ನು ಮೀರಿದ್ದಾರೆ. ಈ ಮೂಲಕ ತವರು ನೆಲವಾದ ನಾಗಪುರಕ್ಕೆ ಒಂದು ಕಳಂಕವಾಗಿದ್ದಾರೆ ಎಂದು ದೂರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!