ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಮತ್ತೊಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ . ಇಂದು ಸಿನಿಮಾ ‘ಓ ಮೈ ಗಾಡ್ 2’ (Oh My God 2) ಟೀಸರ್ ರಿಲೀಸ್ ಆಗಿದೆ. ಸಿನಿಮಾದಲ್ಲಿನ ಅಕ್ಷಯ್ (Akshay Kumar) ಅವತಾರಕ್ಕೆ ಅಭಿಮಾನಿಗಳು ಜೈ ಹೋ ಎಂದಿದ್ದಾರೆ.
2012ರಲ್ಲಿ ಓ ಮೈ ಗಾಡ್ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರು ಕೃಷ್ಣನಾಗಿ (Krishna) ಕಾಣಿಸಿಕೊಂಡಿದ್ದರು. ಈ ಬಾರಿ ಅವರು ಶಿವನ (Shiva) ಅವತಾರವೆತ್ತಿದ್ದಾರೆ. ಮೊನ್ನೆಯಷ್ಟೇ ಈ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿತ್ತು. ಅದನ್ನು ಅಕ್ಷಯ್ ಅಭಿಮಾನಿಗಳು ಅಪಾರವಾಗಿ ಮೆಚ್ಚಿದ್ದರು. ಇವತ್ತಿನ ಟೀಸರ್ ಅನ್ನು ಅಷ್ಟೇ ಮೆಚ್ಚಿಕೊಂಡಿದ್ದಾರೆ.
ಇದೊಂದು ಕಾಮಿಡಿ ಸಿನಿಮಾ. ಶಿವನ ರೂಪದಲ್ಲಿ ಬಂದಿರುವ ಅಕ್ಷಯ್, ಯಾವೆಲ್ಲ ಲೀಲೆಗಳನ್ನು ಪರದೆಯ ಮೇಲೆ ಆಡುತ್ತಾರೋ ಕಾದು ನೋಡಬೇಕು. ಟೀಸರ್ ನಲ್ಲಿಯೂ ಹಲವು ಕಾಮಿಡಿ ಅಂಶಗಳು ಇದ್ದು, ಇಡೀ ಸಿನಿಮಾ ಹಾಸ್ಯದ ರಸದೌತಣವನ್ನು ನೀಡುವುದು ಪಕ್ಕಾ ಅನ್ನುವಂತಿದೆ ಟೀಸರ್.
ಟೀಸರ್ ನೋಡಿ ಕೆಲವರು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಆಗದಂತೆ ಎಚ್ಚವಹಿಸಿ ಎಂದು ಸಲಹೆ ನೀಡಿದರೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಂದರೆ ಬೈಕಾಟ್ ಮಾಡುವುದಾಗಿಯೂ ಕೆಲವರು ಕಾಮೆಂಟ್ ಮಾಡಿದ್ದಾರೆ.