ಹೊಸದಿಗಂತ ವರದಿ,ಶಿವಮೊಗ್ಗ:
ಭೀಕರ ಬಸ್ ಅಪಘಾತದ ವೇಳೆ ಗಾಯಾಳುಗಳನ್ನು ರಕ್ಷಿಸಿ, ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದ ನಾಗರೀಕರನ್ನು ಜಿಲ್ಲಾ ಪೊಲೀಸ್ ಇಲಾಖೆ ಸನ್ಮಾನಿಸಿ ಗೌರವಿಸಿದೆ.
ಮೇ 11 ರಂದು ಶಿವಮೊಗ್ಗ-ಸಾಗರ ರಾಷ್ಟ್ರೀಯ ಹೆದ್ದಾರಿಯ ಚೋರಡಿ ಗ್ರಾಮದ ಕುಮುದ್ವತಿ ನದಿ ಸೇತುವೆ ಬಳಿ ಎರಡು ಬಸ್‌ಗಳ ನಡುವೆ ಭೀಕರ ಅಪಘಾತ ಸಂಭವಿಸಿತ್ತು. 30 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದರು. ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದರು.
ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಹೊರಟಿದ್ದ ಮತ್ತು ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಬಸ್ ನಡುವೆ ಅಪಘಾತ ಸಂಭವಿಸಿತ್ತು.
ಈ ವೇಳೆ ನೆರವಾದ ನಿರಂಜನ ಗೌಡ, ಲೋಹಿತ್ ಪ್ರಸಾದ್, ಲಕ್ಷ್ಮೀನಾರಾಯಣ, ರಾಜೇಶ್, ಸುಮಂತ ಮತ್ತು ನಿರಂಜನ ಶೆಟ್ಟಿ ಅವರಿಗೆ ಇಲಾಖೆ ಗೌರವಿಸಿದೆ.
ಎಸ್ಪಿ ಮಿಥುನ್‌ಕುಮಾರ್, ಹೆಚ್ಚುವರಿ ಎಸ್ಪಿ ಅನಿಲ್‌ಕುಮಾರ್ ಭೂಮರೆಡ್ಡಿ, ಇನ್ಸ್‌ಪೆಕ್ಸರ್ ಹರೀಶ್ ಪಟೇಲ್ ಇದ್ದರು. ಅಪಘಾತದ ವೇಳೆ ನೆರವಾಗುವವರ ಸಂಖ್ಯೆ ಹೆಚ್ಚಲಿ ಎಂದು ಈ ಸಂದರ್ಭದಲ್ಲಿ ಎಸ್ಪಿ ಮಿಥುನ್‌ಕುಮಾರ್ ಆಶಯ ವ್ಯಕ್ತಪಡಿಸಿದರು.