ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ರಾಖಿ ಸಾವಂತ್ ಅಂದರೆ ಅಲ್ಲಿ ಒಂದಲ್ಲ ಒಂದು ಸುದ್ದಿ ಇದ್ದೆ ಇರುತ್ತೆ. ಸದಾ ಟ್ರೋಲ್ ಆಗುತ್ತಲೇ ಖುಷಿ ಪಡುತ್ತಾರೆ.
ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿಷಯದಲ್ಲಿ ಸುದ್ದಿಯಲ್ಲಿದ್ದಾರೆ. ಅದೇನೆಂದರೆ ಪ್ರಧಾನಿ ಆಕಾಂಕ್ಷಿಯಾಗಿರುವ ರಾಹುಲ್ ಗಾಂಧಿಯವರು ಪ್ರಧಾನಿ ಪಟ್ಟ ಏರಲು ಏನು ಮಾಡಬೇಕು ಎಂದು ರಾಖಿ ಸಾವಂತ್ ಟಿಪ್ಸ್ ಕೊಟ್ಟಿದ್ದಾರೆ.
ಇದರ ವಿಡಿಯೋ ಸಕತ್ ವೈರಲ್ ಆಗುತ್ತಿದ್ದು, ಥಹರೇವಾರಿ ಕಮೆಂಟ್ಗಳ ಸುರಿಮಳೆಯಾಗುತ್ತಿದೆ. ಹೇಗಾದರೂ ಮಾಡಿ ಬಿಜೆಪಿಯನ್ನು ಕೆಳಕ್ಕಿಳಿಸಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಬೇಕು ಎಂದು ಕಾಂಗ್ರೆಸ್ಸಿಗರು ತಲೆ ಕೆಡಿಸಿಕೊಂಡಿರುವ ಸಮಯದಲ್ಲಿಯೇ ರಾಖಿ ಸಾವಂತ್ ರಾಹುಲ್ ಗಾಂಧಿಯವರು ಪ್ರಧಾನಿಯಾಗಲು ಏನು ಮಾಡಬೇಕು ಎಂದು ಸುಲಭದ ಟಿಪ್ಸ್ ಕೊಟ್ಟಿದ್ದಾರೆ.
ರಾಹುಲ್ ಗಾಂಧಿಯವರು ಬಿಗ್ಬಾಸ್ಗೆ (Bigg Boss) ಒಮ್ಮೆ ಹೋಗಬೇಕು ಎನ್ನುವುದು.
ರಾಖಿ ಸಾವಂತ್ ಕೂಡ ಲವೊಂದು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಆದರೆ ಅವರಿಗೆ ಹೆಚ್ಚು ಖ್ಯಾತಿ ಕೊಟ್ಟಿದ್ದು ಬಿಗ್ಬಾಸ್. ಬಿಗ್ಬಾಸ್ ಮನೆಯಲ್ಲಿ ಹೋಗಿ ಹಂಗಾಮಾ ಸೃಷ್ಟಿಸಿ ವಾಪಸ್ ಬಂದ ಮೇಲೆಯೇ ಇವರು ಸಕತ್ ಸುದ್ದಿ ಮಾಡಿದ್ದು. ಇದೇ ಕಾರಣಕ್ಕೆ ರಾಹುಲ್ ಗಾಂಧಿಯವರು ಬಿಗ್ಬಾಸ್ ಮನೆಯೊಳಕ್ಕೆ ಹೋದರೆ ಅವರ ಕೀರ್ತಿ ಹೆಚ್ಚುತ್ತದೆ. ಅವರು ಪ್ರಧಾನಿಯಾಗುತ್ತಾರೆ ಎಂದಿದ್ದಾರೆ ರಾಖಿ. ಬಿಗ್ಬಾಸ್ ಹಲವರಿಗೆ ಭವಿಷ್ಯ ನೀಡಿದೆ. ಅದೇ ರೀತಿ ರಾಹುಲ್ ಗಾಂಧಿಯವರಿಗೂ ನೀಡುತ್ತದೆ ಎಂದಿದ್ದಾರೆ.