ಸೀತಾ ಮಾತೆಯ ಸೌಂದರ್ಯಕ್ಕೆ ರಾಮ- ರಾವಣ ಹುಚ್ಚರಾಗಿದ್ದರು: ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹೊಸದಿಗಂತ ವರದಿ,ಶಿವಮೊಗ್ಗ: ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸೋಮವಾರ ರಾತ್ರಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಚಿವ ರಾಜೇಂದ್ರ ಸಿಂಗ್‌ ಗುಧಾ ಈ ವೇಳೆ ನೀಡಿದ್ದ ಹೇಳಿಕೆ ವೈರಲ್‌ ಆಗಿದೆ.

ರಾಜಸ್ಥಾನ ಕಾಂಗ್ರೆಸ್ ಸರಕಾರದ ಸೇನಾ ಕಲ್ಯಾಣ ಖಾತೆಯ ರಾಜ್ಯ ಸಚಿವ ರಾಜೇಂದ್ರ ಸಿಂಗ್ ಗುಧಾ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಜುಂಜುನುದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಜೇಂದ್ರ ಸಿಂಗ್ ಗುಧಾ, ಸೀತಾ ಮಾತೆಯ ಕುರಿತಾಗಿ ವಿವಾದಿತ ಮಾತುಗಳನ್ನು ಆಡಿದ್ದಾರೆ. ‘ಸೀತಾ ಮಾತೆ ಬಹಳ ಸುಂದರವಾಗಿದ್ದಳು. ಆಕೆ ಅದೆಷ್ಟು ಸುಂದರವಾಗಿದ್ದಳು ಎಂದರೆ ರಾಮ ಹಾಗೂ ರಾವಣ ಇಬ್ಬರೂ ಆಕೆಯನ್ನೂ ನೋಡಿ ಹುಚ್ಚರಾಗಿದ್ದರು. ಸೀತೆ ಸುಂದರವಾಗಿದ್ದ ಕಾರಣಕ್ಕೆ ರಾಮ ಹಾಗೂ ರಾವಣರ ನಡುವೆ ಯುದ್ಧ ನಡೆದಿತ್ತು’ ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

‘ಸೀತಾ ಮಾತೆ ಬಹಳ ಸುಂದರವಾಗಿದ್ದಳು. ಆಕೆ ಜನಕರಾಜನ ಮಗಳು. ಬಹಳ ಸುಂದರವಾಗಿದ್ದಳು. ಸೀತಾ ಮಾತೆಯ ಸೌಂದರ್ಯದ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ರಾಮ ಹಾಗೂ ರಾವಣ ಇಬ್ಬರೂ ಉತ್ತಮ ವ್ಯಕ್ತಿಗಳು. ಆದರೆ, ಇಬ್ಬರೂ ಕೂಡ ಸೀತಾ ಮಾತೆಗೆ ಹುಚ್ಚರಾಗಿದ್ದರು. ನಿಜಕ್ಕೂ ಸೀತಾ ಮಾತೆ ಸುಂದರವಾಗಿದ್ದಳು. ಇದನ್ನೂ ಯಾರೂ ಕೂಡ ಊಹಿಸಲು ಸಾಧ್ಯವಿಲ್ಲ’ ಎಂದು ಶಾಸಕ ರಾಜೇಂಧ್ರ ಸಿಂಗ್‌ ಗುಧಾ ಹೇಳಿದ್ದಾರೆ. ಅಷ್ಟಕ್ಕೆ ನಿಲ್ಲದ ಅವರು, ತಮ್ಮನ್ನೇ ಸೀತಾ ಮಾತೆಗೆ ಹೋಲಿಸಿಕೊಂಡಿದ್ದಾರೆ. ನನ್ನಲ್ಲಿರುವ ಗುಣಗಳ ಕಾರಂದಿಂದಾಗಿಯೇ ಮುಖ್ಯಮಂತ್ರಿ ಅಶೋಕ್‌ ಗೆಹ್ಲೊಟ್‌ ಹಾಗೂ ಸಚಿನ್ ಪೈಲಟ್‌ ಇಬ್ಬರಿಗೂ ನಾನು ಬೇಕಾಗಿದ್ದೇನೆ ಎಂದಿದ್ದಾರೆ.

ಗುಧಾ ಹೇಳಿಕೆಯನ್ನು ಬಿಜೆಪಿ ಟೀಕೆ ಮಾಡಿದೆ. ಈ ಕಾಂಗ್ರೆಸ್ಸಿಗರು ಹಿಂದೂಗಳನ್ನು ಗೇಲಿ ಮಾಡಲು ಮತ್ತು ಅವರ ಮತ ಬ್ಯಾಂಕ್ ರಾಜಕೀಯವನ್ನು ಇನ್ನಷ್ಟು ಗಟ್ಟಿಮಾಡಲು ಮತ್ತೆಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ? ಭಗವಾನ್ ಶ್ರೀರಾಮನ ಮೇಲಿನ ಭಾರತದ ನಂಬಿಕೆಯನ್ನು ಹುಚ್ಚ ಎಂದು ಬಣ್ಣಿಸಿದ್ದಾರೆ, ರಾಜಸ್ಥಾನ ಸರ್ಕಾರದ ಸಚಿವ ರಾಜೇಂದ್ರ ಗೂಢಾ ಅವರಿಗೆ ಸ್ವಂತ ಅಸ್ತಿತ್ವದ ಬಗ್ಗೆ ನಾಚಿಕೆಯಾಗಲಿಲ್ಲವೇ?ಇದು ಉದ್ದೇಶಪೂರ್ವಕ ಹೇಳಿಕೆ.ಇಂತಹ ಹೇಳಿಕೆಗಳಿಂದಾಗಿ ಇಂದು ಕಾಂಗ್ರೆಸ್ ಪರಿಸ್ಥಿತಿ ಶೂರ್ಪನಖಾ ಎಂಬಂತಾಗಿದೆ.ರಾವಣನ ತಂಗಿಗೆ ಏನಾಗಿದೆ!ಗೆಹ್ಲೋಟ್ ಜಿ, ನಿಮ್ಮ ಸರ್ಕಾರದ ಸಚಿವನಿಗೆ ಇದು ತಿಳಿದಿರಬೇಕು ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here