ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ವುಡ್ ನಲ್ಲಿ ನಟ ಸುದೀಪ್ ಅವರ ಮೇಲೆ ನಿರ್ಮಾಪಕ ಎಂ.ಎನ್. ಕುಮಾರ್ ಅವರು ಆರೋಪ ಮಾಡಿದ್ದು ಗೊತ್ತೇ ಇದ್ದೆ. ಇದೀಗ ಕಾಲಿವುಡ್ನಲ್ಲೂ (Kollywood) ಅದೇ ರೀತಿಯು ವಿವಾದ ಭುಗಿಲೆದ್ದಿದೆ. ತಮಿಳು ಚಿತ್ರರಂಗದ ಸ್ಟಾರ್ ನಟ ಅಜಿತ್ ಕುಮಾರ್ (Ajith Kumar) ಅವರು ತಮಗೆ ಮೋಸ ಮಾಡಿದ್ದಾರೆ ಎಂದು ಮಾಣಿಕಂ ನಾರಾಯಣನ್ (Manickam Narayanan) ಆರೋಪ ಹೊರಿಸಿದ್ದಾರೆ.
ತಮ್ಮಿಂದ ಹಣ ಪಡೆದು, ಸಿನಿಮಾ ಮಾಡದೇ ಸತಾಯಿಸಿದ್ದಾರೆ ಎಂದು ನಾರಾಯಣನ್ ಹೇಳಿರುವುದು ಸಂಚಲನ ಸೃಷ್ಟಿ ಮಾಡಿದೆ.
ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಅಜಿತ್ ಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ‘ಅಜಿತ್ ಅವರು ಬಹಳ ವರ್ಷಗಳ ಹಿಂದೆ ತಂದೆ-ತಾಯಿಯನ್ನು ಮಲೇಷಿಯಾಗೆ ಕಳಿಸಲು ನನ್ನಿಂದ ಹಣ ಪಡೆದಿದ್ದರು. ಮುಂದಿನ ದಿನಗಳಲ್ಲಿ ಒಟ್ಟಿಗೆ ಸಿನಿಮಾ ಮಾಡೋಣ, ಈ ಹಣವನ್ನು ಸಂಭಾವನೆಗೆ ಸರಿ ಮಾಡಿಕೊಳ್ಳೋಣ ಅಂತ ಅವರು ಹೇಳಿದ್ದರು. ಇಂದಿನ ತನಕ ಅವರ ನನ್ನ ಜೊತೆ ಸಿನಿಮಾವನ್ನೂ ಮಾಡಿಲ್ಲ, ಹಣವನ್ನೂ ಹಿಂದಿರುಗಿಸಿಲ್ಲ’ ಎಂದು ಹೇಳಿದ್ದಾರೆ.
‘ಈ ಬಗ್ಗೆ ಅಜಿತ್ ಅವರು ಇಷ್ಟು ವರ್ಷಗಳ ತನಕ ಮಾತನಾಡಿಲ್ಲ. ತನ್ನನ್ನು ತಾನು ಒಳ್ಳೆಯವನು ಅಂತ ಅವರು ಹೇಳಿಕೊಳ್ಳುತ್ತಾರೆ. ಆದರೆ ಅವರು ಒಳ್ಳೆಯ ಮನುಷ್ಯ ಅಲ್ಲ. ಅವರದ್ದು ಒಳ್ಳೆಯ ಕುಟುಂಬ. ವರ್ಷಕ್ಕೆ ಅವರು 50 ಕೋಟಿ ರೂಪಾಯಿ ಸಂಪಾದನೆ ಮಾಡುತ್ತಾರೆ. ಹೀಗಿರುವಾಗ ಅವರು ಜನರಿಗೆ ಯಾಕೆ ಮೋಸ ಮಾಡಬೇಕು? ಅವರ ಜೊತೆ ಸಿನಿಮಾ ಮಾಡಿದ ನಿರ್ಮಾಪಕರಿಗೆ ನಷ್ಟ ಆಗಿದೆ. ಹಾಗಿದ್ದರೂ ಕೂಡ ಅವರು ನಿರ್ಮಾಪಕರಿಗೆ ಸಹಾಯ ಮಾಡಿಲ್ಲ’ ಎಂದು ಹೇಳಿದ್ದಾರೆ.
ಮಾಣಿಕಂ ನಾರಾಯಣನ್ ಹೊರಿಸಿದ ಆರೋಪಗಳಿಗೆ ಅಜಿತ್ ಯಾವ ರೀತಿ ಉತ್ತರ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.