ಗೂಗಲ್ ಡೂಡಲ್ ನಲ್ಲಿ ದೇಶದ ಜನಪ್ರಿಯ ಸ್ಟ್ರೀಟ್ ಫುಡ್ ಸೆಲೆಬ್ರೇಷನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸರ್ಚ್ ಎಂಜಿನ್‌ ದೈತ್ಯ ಗೂಗಲ್ ಇಂದು ವಿಶೇಷ ಡೂಡಲ್‌ನೊಂದಿಗೆ ಭಾರತದ ಪ್ರಮುಖ ಬೀದಿ ಆಹಾರ ‘ಪಾನಿ ಪುರಿ’ ದಿನವನ್ನು ಆಚರಣೆ ಮಾಡುತ್ತಿದೆ.

ಈ ವಿಶೇಷ ಡೂಡಲ್‌ನಲ್ಲಿ ಗ್ರಾಹಕರ ಆದ್ಯತೆ ಮೇರೆಗೆ ವಿವಿಧ ಪಾನಿ ಪುರಿ ಫ್ಲೇವರ್‌ ಅನ್ನು ಆಯ್ಕೆ ಮಾಡಲು, ಬೀದಿ ವ್ಯಾಪಾರಿಗಳಿಗೆ ಪಾನಿ ಪುರಿ ಆರ್ಡರ್‌ಗಳನ್ನು ತೆಗೆದುಕೊಳ್ಳುವಂತೆ ಸಹಾಯ ಮಾಡಲು ಗೂಗಲ್‌ ಬಳಕೆದಾರರಿಗೆ ಅವಕಾಶ ನೀಡುತ್ತದೆ.

2015ರಲ್ಲಿ ಈ ದಿನದಂದು, ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ರೆಸ್ಟೋರೆಂಟ್ ತನ್ನ ಗ್ರಾಹಕರಿಗೆ 51 ವಿಭಿನ್ನವಾದ ಪಾನಿ ಪುರಿ ನೀಡಿದ್ದಕ್ಕಾಗಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರಿದೆ.

ಆಲೂಗಡ್ಡೆ, ಕಡಲೆ, ಮಸಾಲೆಗಳು ಅಥವಾ ಮೆಣಸಿನಕಾಯಿಗಳು ಮತ್ತು ಸುವಾಸನೆಯ ನೀರಿನಿಂದ ತುಂಬಿದ ಗರಿಗರಿಯಾದ ಪೂರಿಯಿಂದ ಮಾಡಿದ ಪಾನಿ ಪುರಿಯನ್ನು ಜನಪ್ರಿಯ ‘ದಕ್ಷಿಣ ಏಷ್ಯಾದ ಬೀದಿ ಆಹಾರ’ ಎಂದು ಕರೆಯುವ ಮೂಲಕ ಗೂಗಲ್ ಹೊಸ ಪಾನಿ ಪುರಿ ಗೇಮ್ ಡೂಡಲ್ ಅನ್ನು ಪರಿಚಯಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!