- ನೀರಿನಿಂದ ಸ್ವಲ್ಪ ದೂರ ಇಡಿ
- ಸೋಪ್ನ್ನು ಆಗಾಗ ಬಿಸಿಲಿಗೆ ತಂದು ಇಡಿ
- ನೀರು ಇಳಿಯುವ ಬಾಕ್ಸ್ನಲ್ಲಿ ಸೋಪ್ನ್ನು ಇಡಿ
- ಚಿಕ್ಕಚಿಕ್ಕ ಸೋಪ್ ಪೀಸ್ಗಳನ್ನು ಒಂದು ಪ್ಯಾಕೆಟ್ನಲ್ಲಿ ಹಾಕಿಡಿ, ಹೊರಗೆ ಹೋದಾಗ ಇವುಗಳನ್ನು ಬಳಸಬಹುದು
- ನಿಮ್ಮ ನೀರು ಗಡುಸಾಗಿದೆಯಾ ಗಮನಿಸಿ, ಸಿಹಿ ನೀರಿನಲ್ಲಿ ಸೋಪ್ ಬೇಗ ಕರಗುತ್ತದೆ.
- ತಣ್ಣೀರಿನಲ್ಲಿ ಸೋಪ್ ಬಳಸಿದರೆ ಹೆಚ್ಚು ಕಾಲ ಬಾಳಿಕೆ ಬರುತ್ತದೆ.
- ಸೋಪ್ ಹೆಚ್ಚು ಕಾಲ ಬಾಳಿಕೆ ಬರಬೇಕು ಎನ್ನುವವರು ಸೋಪ್ ಖರೀದಿಗೂ ಮುನ್ನ ಅದರ ಪದಾರ್ಥಗಳನ್ನು ಚೆಕ್ ಮಾಡಿ, ಗಟ್ಟಿಯಾದ ಫ್ಯಾಟ್ ಹಾಗೂ ಎಣ್ಣೆ ಇರುವ ಸೋಪ್ಗಳು ತೆಳುವಾದ ಫ್ಯಾಟ್ ಹಾಗೂ ಲಿಕ್ವಿಡ್ ಆಯಿಲ್ ಹಾಕಿರುವ ಸೋಪ್ಗಿಂತ ಹೆಚ್ಚು ಬಾಳಿಕೆ ಬರುತ್ತವೆ,
- ಹೆಚ್ಚು ಬಳಕೆ ಬರಲು ಸೋಪ್ನ್ನು ಎರಡು ಭಾಗ ಮಾಡಿ ಬಳಸಿ, ಇದರಿಂದಾಗಿ ಕಡಿಮೆ ಸೋಪ್ ಬಳಕೆ ಮಾಡುತ್ತೀರಿ.
- ಸೋಪ್ನ್ನು ಲಿಕ್ವಿಡ್ಆಗಿ ಬದಲಾಯಿಸಿಕೊಂಡರೆ ಇನ್ನಷ್ಟು ದಿನ ಬಾಳಿಕೆ ಬರುತ್ತದೆ. ಸೋಪ್ ತುರಿದು ಪುಡಿಯನ್ನು ಡಬ್ಬಿಗೆ ಹಾಕಿ, ಇದಕ್ಕೆ ಶುದ್ಧ ನೀರು ಹಾಕಿ ರಾತ್ರಿಯಿಡೀ ಹಾಗೇ ಬಿಡಿ, ಬೆಳಗ್ಗೆ ಚೆನ್ನಾಗಿ ಮಿಕ್ಸ್ ಮಾಡಿದರೆ ಬಳಕೆಗೆ ಲಿಕ್ವಿಡ್ ಸೋಪ್ ರೆಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ