ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿದ್ದರಾಮಯ್ಯ ಸರ್ಕಾರ ಮಾಡಿರುವ ಯೋಜನೆಗಳಿಂದ ಬಡವರಿಗೆ ಸಾಕಷ್ಟು ಸಹಾಯ ಆಗಿದೆ, ಬಡವರು ಮಕ್ಳು ಬೆಳೀಬೇಕು, ಅದಕ್ಕೆ ಸೂಕ್ತವಾಗಿರೋದು ನಮ್ಮ ಗ್ಯಾರೆಂಟಿಗಳು ಎಂದು ವಿಧಾನಸಭೆ ಕಲಾಪದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿದ್ದಾರೆ.
ಹಸಿವಿನ ಬೆಲೆ ಗೊತ್ತಿದ್ದವರಿಗೆ ಮಾತ್ರ ಗ್ಯಾರೆಂಟಿಗಳ ಬೆಲೆ ಅರ್ಥವಾಗೋದು, ಎಲ್ಲ ಇದ್ದವನಿಗೆ ಇದೆಲ್ಲಾ ಬೇಡ ಆದರೆ ಒಂದು ಹೊತ್ತು ಊಟಕ್ಕೂ ಕಷ್ಟಪಡೋರು ಸಿದ್ದರಾಮಯ್ಯ ಅವರು ಹೆಸರನ್ನು ಹೇಳಿಕೊಂಡು ಊಟ ಮಾಡ್ತಾರೆ ಎಂದಿದ್ದಾರೆ.
ಸಿನಿಮಾ ಡೈಲಾಗ್ ಇದೆಯಲ್ಲಾ ಬಡವರ ಮಕ್ಳು ಬೆಳಿಬೇಕು ಕಣ್ರಯ್ಯಾ ಅಂತ ಅದೆಲ್ಲಾ ಸಾಧ್ಯವಾಗೋದು ಕಾಂಗ್ರೆಸ್ ಸರ್ಕಾರದಿಂದ ಮಾತ್ರ. ಯೋಜನೆಗಳ ಬಗ್ಗೆ ಕೊಂಕು ಬೇಡ, ರಾಜಕೀಯವೂ ಬೇಡ ಬಡವರು ಇದರ ಪ್ರಯೋಜನ ಪಡೆದುಕೊಳ್ಳಲಿ ಎಂದು ಹೇಳಿದ್ದಾರೆ.