ಪಾದಯಾತ್ರೆ ಆರಂಭಿಸಲಿದ್ದಾರೆ ನಟ ವಿಜಯ್: ತಮಿಳುನಾಡು ರಾಜಕೀಯದಲ್ಲಿ ಹೀಗೊಂದು ಸುದ್ದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಟ ವಿಜಯ್ ಸಿನಿಮಾ ಮಾಡುತ್ತಲೇ ಮಧ್ಯೆ ಮಧ್ಯೆ ರಾಜಕೀಯ ಟೀಕೆ ಮಾಡುತ್ತಾ ಹಲವು ವರ್ಷಗಳಿಂದ ಸುದ್ದಿಯಲ್ಲಿರುವ ಈ ಹೀರೋ ಈಗ ಫುಲ್ ಟೈಮ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ವಿಜಯ್ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ಮಾತು ಜೋರಾಗಿ ಕೇಳಿಬರುತ್ತಿದೆ. ‘ವಿಜಯ್ ಮಕ್ಕಳ್ ಇಯಕ್ಕಂ’ ಅಭಿಮಾನಿ ಬಳಗದ ಮೂಲಕ ಹಲವು ವರ್ಷಗಳಿಂದ ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಿರುವ ವಿಜಯ್ ಕಳೆದ ಕೆಲವು ದಿನಗಳಿಂದ ಆ ಕ್ಲಬ್ ಸದಸ್ಯರನ್ನು ಆಗಾಗ ಭೇಟಿಯಾಗುತ್ತಿದ್ದಾರೆ.

ಆದರೆ ಈ ಸಭೆಗಳು ಸೇವಾ ಚಟುವಟಿಕೆಗಳಿಗೆ ಸಂಬಂಧಿಸಿಲ್ಲ ಎಂದು ತಿಳಿದುಬಂದಿದೆ. ಜನತೆ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ರಾಜಕೀಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ತಮಿಳುನಾಡು ರಾಜಕೀಯ ವಲಯದಲ್ಲಿ ಗುಸು ಗುಸು ಎದ್ದಿದೆ. ಈ ಕ್ರಮದಲ್ಲಿ ಮಂಗಳವಾರ (ಜು.13) ವಿಜಯ್ ಅವರು 15 ಜಿಲ್ಲೆಗಳ ಸಾರ್ವಜನಿಕ ಸಂಘಗಳ ಸದಸ್ಯರನ್ನು ಭೇಟಿ ಮಾಡಲಿದ್ದಾರೆ ಎಂಬ ವಿಚಾರ ಹೊರಬಿದ್ದಿದ್ದು,  ಸಾರ್ವಜನಿಕ ಸಮಸ್ಯೆಗಳ ವಿರುದ್ಧ ಪಾದಯಾತ್ರೆ ಕೈಗೊಳ್ಳುವ ಸಾಧ್ಯತೆಯಿದೆಯಂತೆ. ಸದ್ಯದಲ್ಲೇ ಈ ಪಾದಯಾತ್ರೆ ಆರಂಭಿಸಿ ತಮಿಳುನಾಡು ರಾಜ್ಯದಾದ್ಯಂತ ಪ್ರವಾಸ ಮಾಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಈ ಸುದ್ದಿಯಲ್ಲಿ ಎಷ್ಟು ಸತ್ಯಾಂಶವಿದೆಯೋ ಗೊತ್ತಿಲ್ಲ, ಆದರೆ ಈ ವಿಷಯ ತಮಿಳುನಾಡಿನಲ್ಲಿ ಹಲವು ಚರ್ಚೆಗೆ ಕಾರಣವಾಗಲಿದೆ. ಇತ್ತೀಚೆಗೆ ತಮಿಳುನಾಡಿನ 234 ಕ್ಷೇತ್ರಗಳಿಂದ 10ನೇ ತರಗತಿ ಹಾಗೂ ಪಿಯುಸಿ ತರಗತಿಗಳಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ವಿಜಯ್, ಮತವು ಪ್ರಬಲ ಅಸ್ತ್ರವಾಗಿದ್ದು, ಹಣಕ್ಕೆ ಮಾರಿಕೊಳ್ಳಬಾರದು ಎಂಬ ಸಂದೇಶ ಸಾರಿದ್ದರು. ವಿಜಯ್ ಅವರ ತಂದೆ ಈಗಾಗಲೇ ವಿಜಯ್ ಹೆಸರಿನಲ್ಲಿ ರಾಜಕೀಯ ಪಕ್ಷವನ್ನು ನಡೆಸುತ್ತಿದ್ದಾರೆ. ಆದರೆ ಅದೇ ಪಕ್ಷವನ್ನು ವಿಜಯ್ ಮುನ್ನಡೆಸುತ್ತಾರಾ? ಅಥವಾ ಬೇರೆ ಪಕ್ಷದ ಜೊತೆ ಬರುತ್ತಾರಾ? ಕಾದು ನೋಡಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!