ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿನ ಟಿ.ನರಸೀಪುರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್‌ನ್ನು ಭೀಕರವಾಗಿ ಹತ್ಯೆ ಮಾಡಿದ್ದು, ವೇಣುಗೋಪಾಲ್ ಕುಟುಂಬಕ್ಕೆ ಮಾಜಿ ಸಚಿವ ಶ್ರೀರಾಮುಲು ಭೇಟಿ ನೀಡಿದ್ದಾರೆ.
ಹಿಂದೂ ಸಂಘಟನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯುವಕನನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಇರುವವರೆಗೂ ಸೇಫ್ ಅಲ್ಲ, ಹಿಂದೂ ಕಾರ್ಯಕರ್ತರು ಒಬ್ಬೊಬ್ಬರೇ ಓಡಾಡಬೇಡಿ ಎಂದಿದ್ದಾರೆ.
ಈ ಕೊಲೆಗೆ ನ್ಯಾಯ ಸಿಗಬೇಕು, ಇದನ್ನು ಇಲ್ಲಿಗೇ ಬಿಡೋದಿಲ್ಲ ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಹೋರಾಟ ಮಾಡ್ತೇವೆ ವೇಣುಗೋಪಾಲ್ ಕುಟುಂಬಕ್ಕೆ ನ್ಯಾಯ ಕೊಡಿಸ್ತೇವೆ ಎಂದಿದ್ದಾರೆ.
ಇತ್ತ ವೇಣುಗೋಪಾಲ್ ಪತ್ನಿ ಕಣ್ಣೀರಿಡುತ್ತಾ, ಧರ್ಮಕ್ಕಾಗಿ ನನ್ನ ಗಂಡ ಕೊಲೆಯಾಗಿ ಹೋದ ನಾನು ನನ್ನ ಮಗಳಿಗೆ ಯಾರೂ ಗತಿ ಇಲ್ಲ ನಾವೇನ್ ಮಾಡ್ಬೇಕು ಸರ್ ಎಂದಿದ್ದಾರೆ.