ಐದು ವರ್ಷದ ಮಕ್ಕಳಲ್ಲಿ ಸ್ತನಗಳ ಬೆಳವಣಿಗೆ ಕಾಣಿಸುತ್ತಿದೆ. ಎಂಟು ವರ್ಷದ ಮಕ್ಕಳು ಪ್ಯಾಡ್ ಧರಿಸುವಂತಾಗಿದೆ. ಇದೆಲ್ಲ ನೈಸರ್ಗಿಕವಾಗಿ ಆಗುವುದು ಎಂದು ಸುಮ್ಮನೆ ಇರುವುದಲ್ಲ. ಮಕ್ಕಳು ಬೇಗ ಪಿರಿಯಡ್ಸ್ ಆಗದಂತೆ ತಡೆಯಲು ಹೀಗೆ ಮಾಡಿ..
ಮಕ್ಕಳ ಆಹಾರದ ಮೇಲೆ ನಿಗಾ ಇಡಿ. ಅವರ ದೇಹದ ಬೆಳವಣಿಗೆಗೆ ಬೇಕಾದ ಎಲ್ಲ ನ್ಯೂಟ್ರಿಯಂಟ್ಸ್ ಸಿಗುತ್ತಿದೆಯೇ ನೋಡಿ. ಸಕ್ಕರೆ, ಫ್ಯಾಟ್ ಪದಾರ್ಥಗಳನ್ನು ತಿನ್ನಿಸಬೇಡಿ.
ಮಕ್ಕಳು ಹೊರಗೆ ಆಟವಾಡಬೇಕು. ಯಾವುದಾದರೂ ಒಂದು ರೀತಿಯಲ್ಲಿ ಅವರಿಗೆ ವ್ಯಾಯಾಮ ಹೇಳಿಕೊಡಿ, ಅತಿಯಾಗಿ ದಪ್ಪ ಆಗಲು ಬಿಡಬೇಡಿ.
ಕೆಮಿಕಲ್ ಎಕ್ಸ್‌ಪೋಶರ್ ಕಡಿಮೆ ಮಾಡಿ. ಪ್ಲಾಸ್ಟಿಕ್ ಕವರ್‌ನಲ್ಲಿ ಬರುವ ಆಹಾರ, ಪ್ಲಾಸ್ಟಿಕ್ ಡಬ್ಬಿಯಲ್ಲಿ ಇರುವ ಆಹಾರ ಕೊಡಬೇಡಿ.
ಹೆಚ್ಚು ಟಿವಿ, ಮೊಬೈಲ್ ನೀಡಬೇಡಿ. ಮಕ್ಕಳು ಹೆಚ್ಚು ನಿದ್ದೆ ಮಾಡಲಿ.
ಮಕ್ಕಳಿಗೆ ಒತ್ತಡ ಹೇರಬೇಡಿ. ಮನೆಯಲ್ಲಿ ಎಲ್ಲ ವಿಷಯಗಳ ಬಗ್ಗೆ ಮಾತನಾಡಿ, ಒತ್ತಡ ಬೇಡ

