September 27, 2026
Sunday, September 27, 2026
spot_img

SHOCKING | ಮದುವೆ ಮಂಟಪದಲ್ಲೇ ಹಾರ್ಟ್‌ ಅಟ್ಯಾಕ್‌, ಸ್ಥಳದಲ್ಲೇ ಪ್ರಾಣಬಿಟ್ಟ ಫೋಟೊಗ್ರಾಫರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಫೋಟೊಗ್ರಾಫರ್‌ ಒಬ್ಬರು ಮನೆಯ ಫೋಟೊಗ್ರಫಿ ಮಾಡುತ್ತಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ನಡೆಯುತ್ತಿದ್ದ ರಿಸಪ್ಷನ್‌ ವೇಳೆ ಬೊಮ್ಮನಹಳ್ಳಿಯ ಫೋಟೊಗ್ರಾಫರ್‌ ಮೂರ್ತಿ ಮೃತಪಟ್ಟಿದ್ದಾರೆ.

ಮಂಟಪದ ಫೋಟೊಗಳನ್ನು ತೆಗೆಯುವಾಗ ಮೂರ್ತಿ ಕುಸಿದುಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಅಷ್ಟೊತ್ತಿಗಾಗಲೇ ಮೂರ್ತಿ ಮೃತಪಟ್ಟಿದ್ದಾರೆ.

ಖುಷಿಯಲ್ಲಿದ್ದ ಮದುವೆ ಮನೆಯ ಜನ ಫೋಟೊಗ್ರಾಫರ್‌ ಸಾವಿನಿಂದ ಶಾಕ್‌ನಲ್ಲಿದ್ದಾರೆ. ಸೂತಕದ ಛಾಯೆ ಆವರಿಸಿದೆ.

Must Read