ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ಮತ್ತೊಂದು ಭೀಕರ ಕೊಲೆ ನಡೆದಿದ್ದು, ಗೀತಾ ಕಾಲೋನಿಯ ಫ್ಲೈ ಓವರ್ ಬಳಿ ಕತ್ತರಿಸಿದ ಮಹಿಳೆಯ ಮೃತದೇಹ ಪತ್ತೆಯಾಗಿದೆ.
ಮಹಿಳೆಯನ್ನು ಕೊಂದು ದೇಹವನ್ನು ಕತ್ತರಿಸಿ ಬಿಡಿ ಭಾಗಗಳಾಗಿ ಎಸೆದು ಹೋಗಲಾಗಿದೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕೊಳೆತ ವಾಸನೆ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ಪ್ಲಾಸ್ಟಿಕ್ ಕವರ್ನಲ್ಲಿ ತಲೆ ಹಾಗೂ ಮತ್ತೊಂದು ಕವರ್ನಲ್ಲಿ ದೇಹದ ಇತರ ಭಾಗಗಳನ್ನು ತುಂಬಿ ಬಿಸಾಡಲಾಗಿತ್ತು.
ಮೃತ ಮಹಿಳೆ ಯಾರು ಎನ್ನುವ ಬಗ್ಗೆ ಮಾಹಿತಿ ಇಲ್ಲ, ದೇಹ ಸಾಕಷ್ಟು ಕೊಳೆತು ಹೋಗಿದ್ದು, ಗುರುತು ಸಿಗದಂತೆ ಆಗಿದೆ. ಮರಣೋತ್ತರ ಪರೀಕ್ಷೆ ವೇಳೆ ಗುರುತು ಸಿಗಬಹುದು ಎಂದು ಹೇಳಲಾಗಿದೆ.