ಜೈನಮುನಿ ಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಚರಂತಿಮಠ ಆಗ್ರಹ

ಹೊಸದಿಗಂತ ವರದಿ,ಬಾಗಲಕೋಟೆ :

ಬೆಳಗಾವಿ ಜಿಲ್ಲೆಯ ಚಿಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿ ಪರ್ವತದಲ್ಲಿನ ಜೈನ ಮಂದಿರದ ಮುನಿ ಆಚಾರ್ಯ ಶ್ರೀ ೧೦೮ ಕಾಮಕುಮಾರನಂದಿ ಮಹಾರಾಜರ ಹತ್ಯಯಾಗಿರುವುದು ಅತ್ಯಂತ ದು:ಖದ ವಿಷಯವಾಗಿದೆ, ಮುನಿಮಹಾರಾಜರನ್ನು ಕೊಲೆ ಖಂಡನೀಯ, ಈ ಪ್ರಕರಣವನ್ನು ಸಿಬಿಐ ತನಿಖೆ ಒಳಪಡಿಸಿಬೇಕು ಮುನಿಶ್ರೀಗಳ ಹತ್ಯ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಅದ್ಯಾತ್ಮ ಪ್ರವರ್ತಕರೂ, ಶಾಂತಿ ಪ್ರಿಯರೂ ಮತ್ತು ಅಹಿಂಸೆಯ ಪ್ರತಿಪಾದಕರೂ ಆಗಿರುವ ಜೈನ ಮುನಿಗಳಿಗೆ ಇಂತಹ ಅಹಿತಕರ ಘಟನೆಗಳಿಂದ ತೊಂದರೆಯಾಗದಂತೆ ಭದ್ರತೆಯನ್ನು ನೀಡಬೇಕು, ಟಿ.ನರಸಿಪುರದ ಯುವ ಬ್ರೀಗೇಡ್ ಹಿಂದೂ ಕಾರ್ಯಕರ್ತನ ಹತ್ಯ ಕೂಡಾ ತನಖೆ ಆಗಬೇಕು, ರಾಜ್ಯದಲ್ಲಿ ಹತ್ಯೆಗಳು ಹೆಚ್ಚಿದ್ದು ಕಾನೂನು ಸವ್ಯವಸ್ಥೆ ಸಂಬಂಧ ರಾಜ್ಯ ಸರ್ಕಾರಕ್ಕೆ ಮಾನ್ಯ ಗೌರವ್ಹಾನಿತ ರಾಜ್ಯಪಾಲರು ನಿರ್ದೇಶನ ನೀಡಬೇಕು ಎಂದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!