ಔಷಧಿ ಸಾಗಿಸುತ್ತಿದ್ದ ವಾಹನದಲ್ಲಿ ಕಾಣಿಸಿಕೊಂಡ ಬೆಂಕಿ: ಸುಟ್ಟು ಕರಕಲಾದ ಬಾಕ್ಸ್

ಹೊಸದಿಗಂತ ವರದಿ,ಅಂಕೋಲಾ:

ಪಶು ಆಸ್ಪತ್ರೆಗೆ ಔಷಧಿ ಸಾಗಿಸುತ್ತಿದ್ದ ಟಾಟಾ ಏಸ್ ವಾಹನದಲ್ಲಿ ಬೆಂಕಿ ಹೊತ್ತಿಕೊಂಡು ವಾಹನದಲ್ಲಿದ್ದ ಔಷಧಿ ಬಾಕ್ಸುಗಳು ಸುಟ್ಟು ಕರಕಲಾದ ಘಟನೆ ಪಟ್ಟಣದ ಪುರಲಕ್ಕಿ ಬೇಣ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದೆ.

ಕಾರವಾರದಿಂದ ಹೊನ್ನಾವರದ ಪಶು ಆಸ್ಪತ್ರೆಗೆ ಟಾಟಾ ಏಸ್ ವಾಹನದಲ್ಲಿ ಔಷದಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ಯಾವುದೋ ರಾಸಾಯನಿಕದಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ವಾಹನದಿಂದ ಔಷಧಿ ಬಾಕ್ಸುಗಳನ್ನು ಹೊರತೆಗೆದು ಬೆಂಕಿ ಆರಿಸುವ ಕೆಲಸ ಮಾಡಿದ್ದಾರೆ.

ವಾಹನದಲ್ಲಿದ್ದ ಔಷದಿ ಬಾಕ್ಸುಗಳು ಸುಟ್ಟು ಕರಕಲಾಗಿದ್ದು ಸುತ್ತ ಮುತ್ತಲಿನ ಪ್ರದೇಶದಲ್ಲಿ ಕೆಲ ಸಮಯ ಔಷದಿ ಸುಟ್ಟ ವಾಸನೆ ಹರಡಿತ್ತು.
ಕಾಕತಾಳೀಯ ಎನ್ನುವಂತೆ ಹೊನ್ನಾವರದ ಪಶು ಆಸ್ಪತ್ರೆಗೆ ಔಷದಿ ಸಾಗಿಸುತ್ತಿದ್ದ ವಾಹನದಲ್ಲಿ ಅಂಕೋಲಾ ಪಶು ಆಸ್ಪತ್ರೆಯ ಎದುರೇ ಬೆಂಕಿ ಕಾಣಿಸಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!