ಮಾಡಿದ್ದುಣ್ಣೋ ಮಹರಾಯ: ಹಿಮಾಚಲ ಪ್ರದೇಶದ ಈ ಸೇತುವೆಯನ್ನೊಮ್ಮೆ ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರೀ ಮಳೆ ಮತ್ತು ಪ್ರವಾಹವು ಉತ್ತರ ಭಾರತವನ್ನು ನಾಶಪಡಿಸುತ್ತಿದೆ. ಪ್ರವಾಹದ ನೀರಿನ ಹರಿವಿಗೆ ಮನೆ, ಮಾರುಕಟ್ಟೆ, ಸೇತುವೆಗಳು ಕೊಚ್ಚಿ ಹೋಗುತ್ತಿದ್ದು, ತಗ್ಗು ಪ್ರದೇಶಗಳು ತೀವ್ರ ಸಮಸ್ಯೆ ಎದುರಿಸುತ್ತಿವೆ. ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಭಾರೀ ಪ್ರವಾಹ ಭೀತಿ ಎದುರಾಗಿದೆ. ಈಗಾಗಲೇ ಹಳ್ಳಕೊಳ್ಳಗಳು, ತಗ್ಗುಗಳು ಮತ್ತು ನದಿಗಳು ಪ್ರವಾಹದ ಉಲ್ಬಣದಿಂದ ನಿರ್ಬಂಧಿತ ಪ್ರದೇಶಗಳಿಗೆ ಅಪ್ಪಳಿಸುತ್ತಿವೆ. ಗುಡ್ಡಗಾಡು ಪ್ರದೇಶವಾದ್ದರಿಂದ ಎಲ್ಲೆಡೆ ಭೂಕುಸಿತವಾಗಿದ್ದು, ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಾಡು ಕಡಿದು ಮನುಷ್ಯ ಮಾಡಿದ ಪ್ರಯತ್ನಗಳು ಅವನಿಗೆ ಊನ ಎಂಬುದನ್ನು ಪ್ರಕೃತಿ ಮತ್ತೊಮ್ಮೆ ಸಾಬೀತು ಮಾಡಿದೆ.

ಅಭಿವೃದ್ದಿ ನೆಪದಲ್ಲಿ ಕಾಡುಗಳನ್ನು ತೆರವುಗೊಳಿಸಿ ಕಟ್ಟಿರುವ ಬೃಹತ್‌ ಕಟ್ಟಡ, ರಸ್ತೆ, ಕಾರ್ಖಾನೆಗಳಿಂದಾಗಿ ಜಾಗತಿಕ ತಾಪಮಾನ ಹೆಚ್ಚಾಗಿದೆ. ಸಾಗರ ಮತ್ತು ನದಿಗಳ ಪಾಲು ಮಾಡಿರುವ ತ್ಯಾಜ್ಯ ವಾಪಸ್‌ ನಮಗೇ ನೀಡಿದೆ. ಗಮನಾರ್ಹ ಉದಾಹರಣೆಯೆಂದರೆ, ಹಿಮಾಚಲ ಪ್ರದೇಶದ ಈ ಸೇತುವೆ ಸಂಪೂರ್ಣವಾಗಿ ಟನ್‌ಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯದಿಂದ ತುಂಬಿದೆ.

ಸಂಬಂಧಿತ ವೀಡಿಯೊವನ್ನು ಐಎಫ್‌ಎಸ್ ಪರ್ವೀನ್ ಕಸ್ವಾನ್ ಹಂಚಿಕೊಂಡಿದ್ದಾರೆ. ಅಂದಿನಿಂದ ಇದು ವೈರಲ್ ಆಗುತ್ತಿದೆ. “ಪ್ರಕೃತಿ – 1, ಮಾನವರು – 0. ನದಿಯು ಎಲ್ಲಾ ಕಸವನ್ನು ನಮ್ಮ ಮೇಲೆ ಎಸೆದಿದೆ. ಪ್ಲಾಸ್ಟಿಕ್ ಬಾಟಲಿಗಳು ಮತ್ತು ಇತರ ಜೈವಿಕ ವಿಘಟನೀಯವಲ್ಲದ ತ್ಯಾಜ್ಯದಿಂದ ಸಂಪೂರ್ಣವಾಗಿ ತುಂಬಿದ ಸೇತುವೆಯನ್ನು ವೀಡಿಯೊ ತೋರಿಸುತ್ತದೆ. ವೈರಲ್ ಆಗಿರುವ ವಿಡಿಯೋ ಜನರನ್ನು ಬೆಚ್ಚಿ ಬೀಳಿಸಿದೆ. ಇದು ಪ್ರಕೃತಿಯ ‘ರಿಟರ್ನ್ ಗಿಫ್ಟ್’ ಎಂದು ಕರೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!