ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭೆ ಯ ಮೊದಲ ಅಧಿವೇಶನ ಇನ್ನೇನು ಕಡೆಯ ಹಂತದಲ್ಲಿದ್ದು, ಇಂದು ವರ್ಗಾವಣೆ ರೇಟ್ಕಾರ್ಡ್ ಬಗ್ಗೆ ಭಾರೀ ಚರ್ಚೆಯಾಗಲಿದೆ.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಈಗಾಗಲೇ ಒಂದು ಇಲಾಖೆಗೆ ಸಂಬಂಧಿಸಿದ ಟ್ರಾನ್ಸ್ಫರ್ ರೇಟ್ಕಾರ್ಡ್ ಬಿಡುಗಡೆ ಮಾಡಿದ್ದಾರೆ. ಇಂದು ಇನ್ನಷ್ಟು ಇಲಾಖೆಗಳಿಗೆ ಸಂಬಂಧಿಸಿದ ರೇಟ್ಕಾರ್ಡ್ ಬಿಡುಗಡೆ ಮಾಡಲಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೂಡ ಕೊಡಲಿದ್ದಾರೆ.
ಆಕ್ಷೇಪ ಹೆಚ್ಚಾದರೆ ಹೆಚ್ಚು ಹಣ ನೀಡಿ ವರ್ಗಾವಣೆ ಮಾಡಿದ ಇಲಾಖೆ ಹಾಗೂ ಸಚಿವರ ಹೆಸರುಗಳನ್ನು ಎಚ್ಡಿಕೆ ಬಯಲು ಮಾಡುವ ಸಾಧ್ಯತೆಗಳಿವೆ.