HEALTH| ಅಬ್ಬಾ..ಹ್ಯಾಂಗೊವರ್, ಕಡಿಮೆ ಮಾಡುವ ಮನೆ ಮದ್ದು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಶ್ರಾಂತಿಗಾಗಿ ಒಂದು ಪೆಗ್ ಹಾಕಿದರೆ ತೊಂದರೆ ಇಲ್ಲ, ಆದರೆ ಮದ್ಯ ವ್ಯಸನಿಯಾದರೆ ಆರೋಗ್ಯಕ್ಕೆ ಅಪಾಯ. ಮದ್ಯ ಸೇವಿಸಿದರೆ ಹ್ಯಾಂಗೊವರ್ ಸಮಾನ್ಯ. ಹ್ಯಾಂಗೋವರ್ ಎಂದರೆ ಮದ್ಯ ಸೇವಿಸಿದ ನಂತರ ಬರುವ ದೈಹಿಕ ಮತ್ತು ಮಾನಸಿಕ ಅಸ್ವಸ್ಥತೆ. ಕೆಲವರು ದಿನವಿಡೀ ಈ ಹ್ಯಾಂಗೊವರ್ ನಿಂದ ಬಳಲುತ್ತಾರೆ.

ಪೆಗ್ ಮೇಲೆ ಪೆಗ್ ಹಾಕಿದ್ದೀರಾ ಹ್ಯಾಂಗೊವರ್ ಇದ್ದಂತೆ.. ಇಂತಹ ಹ್ಯಾಂಗೊವರ್ ನಿಂದ ಪರಿಹಾರ ಪಡೆಯಲು ಒಂದಿಷ್ಟು ಮನೆ ಮದ್ದನ್ನು ಸೇವಿಸಿದರೆ ಉಪಶಮನ ಸಿಕ್ಕೀತು.

ಬಾಳೆಹಣ್ಣು, ಪೀನಟ್ಸ್‌ ಬಟರ್: ಅತಿಯಾದ ಮದ್ಯದಿಂದ ತಲೆನೋವು ಅಥವಾ ಹ್ಯಾಂಗೊವರ್ ಬಬರುತ್ತದೆ ಅಂತಹ ಸಮಯದಲ್ಲಿ, ಪೌಷ್ಟಿಕತಜ್ಞರು ಬೆಳಗಿನ ಉಪಾಹಾರಕ್ಕೆ ಬಾಳೆಹಣ್ಣು ಮತ್ತು ಕಡಲೆಕಾಯಿ ಬೆಣ್ಣೆಯೊಂದಿಗೆ ಬ್ರೆಡ್ ತಿನ್ನಲು ಸಲಹೆ ನೀಡುತ್ತಾರೆ. ಇವು ತಲೆನೋವು ಮತ್ತು ಆಯಾಸವನ್ನು ಹೋಗಲಾಡಿಸುತ್ತದೆ.

ನಿಂಬೆ ರಸ: ಹ್ಯಾಂಗೊವರ್ ಕಡಿಮೆ ಮಾಡಲು, ಬೆಚ್ಚಗಿನ ನೀರಿಗೆ ನಿಂಬೆ ರಸವನ್ನು ಸೇರಿಸಿ ಮತ್ತು ಕುಡಿಯಿರಿ. ಇದು ವಾಕರಿಕೆ ಮತ್ತು ವಾಂತಿಯಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಟೀ, ಕಾಫಿ: ಕೆಫೀನ್ ದೇಹವನ್ನು ಎಚ್ಚರಿಸಲು ಉತ್ತೇಜಕವಾಗಿ ಕೆಲಸ ಮಾಡುತ್ತದೆ. ಇದು ಹ್ಯಾಂಗೊವರ್ ನರವನ್ನು ಕಡಿಮೆ ಮಾಡುತ್ತದೆ. ದೇಹವನ್ನು ರಿಲ್ಯಾಕ್ಸ್ ಮಾಡುತ್ತದೆ.

ಮೊಸರು:  ಮದ್ಯಪಾನದಿಂದ ಉಂಟಾಗುವ ಹ್ಯಾಂಗೊವರ್ ಅನ್ನು ಕಡಿಮೆ ಮಾಡಲು ಮೊಸರು ತೆಗೆದುಕೊಳ್ಳಬೇಕು. ಒಳ್ಳೆಯ ಮೊಸರು ಮಾತ್ರ ತೆಗೆದುಕೊಳ್ಳಬೇಕು.

ಶುಂಠಿ ಚಹಾ: ಶುಂಠಿಯ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಆಲ್ಕೋಹಾಲ್ ಕುಡಿಯುವುದರಿಂದ ಉಂಟಾಗುವ ಹ್ಯಾಂಗೊವರ್‌ಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!