ಹೊಸದಿಗಂತ ಡಿಜಿಟಲ್ ಡೆಸ್ಕ್:
ದೊಡ್ಡಬಳ್ಳಾಪುರದ ಕೊಳೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬ ಗೃಹಿಣಿಯನ್ನು ಕೊಲೆ ಮಾಡಿ ಐದು ವರ್ಷದ ಮಗಳನ್ನು ಕಿಡ್ನಾಪ್ ಮಾಡಿದ್ದಾರೆ.
27 ವರ್ಷದ ಭಾರತಿ ಎಂಬಾಕೆಯನ್ನು ವ್ಯಕ್ತಿಯೊಬ್ಬ ಕೊಲೆ ಮಾಡಿ ಮಗುವನ್ನು ಕದ್ದೊಯ್ದಿದ್ದಾನೆ. ಪತಿ ಆಫೀಸ್ ಕೆಲಸ ಮುಗಿಸಿ ಮನೆಗೆ ಬಂದಾಗ ಪತ್ನಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾಳೆ. ಮಗುವೂ ನಾಪತ್ತೆಯಾಗಿದೆ.
ಪತಿ ಸೀದ ಠಾಣೆಗೆ ಬಂದು ದೂರು ದಾಖಲಿಸಿದ್ದು, ಮಗುವನ್ನು ಹುಡುಕಿಕೊಂಡುವಂತೆ ಮನವಿ ಮಾಡಿದ್ದಾರೆ. ಪತಿ ಇಲ್ಲದ ವೇಳೆ ಭಾರತಿ ಎಕ್ಸ್ ಬಾಯ್ಫ್ರೆಂಡ್ ಹರೀಶ್ ಈ ಕೃತ್ಯ ಎಸಗಿರಬಹುದು ಎನ್ನಲಾಗಿದೆ.