HEALTH TIPS| ಸುಟ್ಟಗಾಯಗಳ ಉರಿಯನ್ನು ತಕ್ಷಣ ಕಡಿಮೆ ಮಾಡುವ ಸೂಪರ್ ಟಿಪ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಡುಗೆ ಮಾಡುವಾಗ ಅವಸರದಲ್ಲಿ ಕೈ ಕಾಲುಗಳು ಸುಟ್ಟು ಹೋಗುತ್ತವೆ. ಎಷ್ಟೇ ಎಚ್ಚರಿಕೆ ವಹಿಸಿದರೂ ಕರಲವೊಮ್ಮೆ ಯಡವಟ್ಟಾಗುತ್ತದೆ. ಸುಟ್ಟ ಗಾಯಗಳ ನೋವು ಮತ್ತು ಉರಿ ಅಪಾರ ನೋವನ್ನುಂಟು ಮಾಡುತ್ತದೆ. ಕೆಲವು ಸಲಹೆಗಳನ್ನು ಪಾಲಿಸುವುದರಿಂದ ಸುಟ್ಟಗಾಯಗಳನ್ನು ತ್ವರಿತವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

  • ಟೀ ಬ್ಯಾಗ್‌ಗಳನ್ನು ಸ್ವಲ್ಪ ಸಮಯದವರೆಗೆ ಫ್ರಿಜ್ನಲ್ಲಿಡಿ. ನಂತರ ಇವುಗಳನ್ನು ಸುಟ್ಟ ಗಾಯದ ಮೇಲೆ ಇಡಬೇಕು. ಕಪ್ಪು ಚಹಾದಲ್ಲಿರುವ ಟ್ಯಾನಿಕ್ ಆಮ್ಲವು ನೋವು ಮತ್ತು ಉರಿಯೂತವನ್ನು ಸಹ ಕಡಿಮೆ ಮಾಡುತ್ತದೆ.
  • ರಾತ್ರಿ ಮಲಗುವ ಮುನ್ನ ಸುಟ್ಟ ಗಾಯಗಳ ಮೇಲೆ ಜೇನುತುಪ್ಪವನ್ನು ಹಚ್ಚಬೇಕು. ಗಾಯಗಳ ಮೇಲೆ ಸೋಂಕು ಉಂಟಾಗದಂತೆ ತಡೆಯುತ್ತದೆ.
  • ಪುದೀನಾ ಎಲೆಗಳ ಪೇಸ್ಟ್ ಅನ್ನು ಸುಟ್ಟ ಗಾಯಗಳ ಮೇಲೆ ಲೇಪಿಸಬೇಕು. ಉರಿ ಕಡಿಮೆಯಾಗಿ ಗಾಯಗಳೂ ಬೇಗ ವಾಸಿಯಾಗುತ್ತವೆ.
  • ನೇರಳೆ ಎಲೆಗಳನ್ನು ಎರಡು ಪೀಸ್‌ ಮಾಡಿ ಕಪ್ಪು ಬಣ್ಣಕ್ಕೆ ಬರುವವರೆಗೆ ಹುರಿಯಿರಿ. ನಂತರ ಅವುಗಳನ್ನು ಒಂದು ಜಾರ್ನಲ್ಲಿ ಹಾಕಿ  ಪುಡಿಯಾಗಿ ಸಂಗ್ರಹಿಸಿ. ಈ ಪುಡಿಯನ್ನು ಸೂಕ್ತ ಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ಎಳ್ಳೆಣ್ಣೆಯೊಂದಿಗೆ ಬೆರೆಸಿ ಪೇಸ್ಟ್ ಮಾಡಿ. ನಂತರ ಈ ಪೇಸ್ಟ್ ಅನ್ನು ದಿನಕ್ಕೆರಡು ಬಾರಿ ಸುಟ್ಟ ಗಾಯಗಳ ಮೇಲೆ ಹಚ್ಚುವುದರಿಂದ ಚರ್ಮ ಸಹಜವಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!