ಬೆಂಗಳೂರು ಜೋಡಿ ಕೊಲೆ ಪ್ರಕರಣ: ಸುಪಾರಿ ನೀಡಿದ್ದ ಜಿ-ನೆಟ್ ಮಾಲೀಕನ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಡೀ ಬೆಂಗಳೂರಿಗರೇ ಬೆಚ್ಚಿಬೀಳುವಂತೆ ಮಾಡಿದ್ದ ಏರೋನಿಕ್ಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಫಣೀಂದ್ರ ಹಾಗೂ ಸಿಇಒ ವಿನುಕುಮಾರ್ ಕೊಲೆ ಪ್ರಕರಣದಲ್ಲಿ ಜಿ-ನೆಟ್ ಕಂಪನಿ ಮಾಲೀಕ ಅರುಣ್‌ಕುಮಾರ್‌ನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಜುಲೈ 11ರಂದು ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನು ಬಂಧಿಸಿದ್ದ ಪೊಲೀಸರು, ಅರುಣ್‌ನನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.

ಅರುಣ್ ಕುಮಾರ್ ಬಂಧಿತ ಆರೋಪಿ. ಜಿ-ನೆಟ್ ಕಂಪನಿ ಮಾಲೀಕನಾಗಿದ್ದ ಅರುಣ್ ಕುಮಾರ್ ಆಪ್​ ಪಕ್ಷದ ಮುಖಂಡನಾಗಿ ಗುರುತಿಸಿಕೊಂಡಿದ್ದರು. ಜಿ-ನೆಟ್ ಕಂಪನಿಯಲ್ಲಿ ಫಣೀಂದ್ರ ಹೆಚ್ಆರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ವಿನು ಕುಮಾರ್ ಸಿಇಒ ಆಗಿ ಕೆಲಸ ಮಾಡುತ್ತಿದ್ದರು. 8 ತಿಂಗಳ ಹಿಂದೆ ಫಣೀಂದ್ರ ಹಾಗೂ ವಿನು ಕುಮಾರ್ ಕೆಲಸ ತೊರೆದು ಅಮೃತಹಳ್ಳಿಯಲ್ಲಿ ತಮ್ಮದೇ ಆದ ಹೊಸ ಕಂಪನಿ‌ ಸ್ಥಾಪಿಸಿದ್ದರು. ಹೊಸ ಕಂಪನಿ ಸ್ಥಾಪನೆಯಿಂದ ಅರುಣ್ ಕುಮಾರ್​ಗೆ ವ್ಯವಹಾರದಲ್ಲಿ ನಷ್ಟವಾಗಿತ್ತು. ಈ ಕಾರಣಕ್ಕೆ ಜೋಕರ್ ಫೆಲಿಕ್ಸ್ ಅಲಿಯಾಸ್ ಶಬರೀಶ್ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ ಎಂಬ ಅನುಮಾನದ ಮೇರೆಗೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಕೃತ್ಯದಲ್ಲಿ ಶಾಮೀಲಾಗಿರುವುದರಿಂದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!