ಈ ಸೀರೆ ಕೊಳ್ಳುವ ಬದಲು ಒಂದು ಸಿಂಗಲ್‌ ಬೆಡ್‌ ರೂಂ ಮನೆ ಕಟ್ಟಬಹುದು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೀರೆ ಅಂದ್ರೆ ಹೆಂಗಳೆಯರು ನಾ ಮುಂದು ತಾಮುಂದು ಅಂತ ಶಾಪಿಂಗ್‌ ಮಾಡೋಕೆ ರೆಡಿಯಾಗ್ತಾರೆ. ಅಂಗಡಿಯಲ್ಲಿರುವ ತಹರೇವಾರಿ ಸೀರೆ ನೋಡಿದ್ರೂ ಅವರ ಮನಸಿಗೆ ನೆಮ್ಮದಿನೇ ಇಲ್ಲ. ಅದೇ ರೀತಿ ಹೆಣ್ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿಯೇ ಕಸೂತಿ ಮಾಡಿರುತ್ತಾರೆ.  ಸಾಮಾನ್ಯವಾಗಿ ಒಂದು ಸೀರೆ ಬೆಲೆ ಎಷ್ಟಿರಬಹುದು 350ರೂಪಾಯಿ ಇಂದು ಶುರು ಆದ್ರೆ ಒಂದು ಲಕ್ಷದವರೆಗೂ ಇರಬಹುದು. ಮಧ್ಯಮ ವರ್ಗದ ಹೆಣ್ಣು ಮಕ್ಕಳಿಗೇ ಈ ಬೆಲೆನೇ ಹೆಚ್ಚು ಅಂಥದ್ರಲ್ಲಿ ಈಗ ನಾವು ಹೇಳಲು ಹೊರಟಿರುವ ಸೀರೆ ತೆಗೆದುಕೊಳ್ಳೋಕಾಗುತ್ತಾ? ಅದರ ಬೆಲೆ ಕೇಳಿದ್ರೆ ದಂಗಾಗೋದು ಗ್ಯಾರೆಂಟಿ. ಈ ಸೀರೆ ಕೊಳ್ಳುವ ಬದಲು ಒಂದು ಸಿಂಗಲ್ ಬೆಡ್ ರೂಮ್ ಮನೆ ಕಟ್ಟಬಹುದು.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿರುವ ಈ ಸೀರೆಯ ಬೆಲೆ ಅಕ್ಷರಶಃ 21 21.9 ಲಕ್ಷ ರೂಪಾಯಿ. ಉತ್ತರ ಪ್ರದೇಶದ ಲಕ್ನೋ ಬಟ್ಟೆ ಅಂಗಡಿಯಲ್ಲಿ ಮಾರಾಟವಾದ ಈ ಸೀರೆ ಮಾರುಕಟ್ಟೆಯನ್ನು ಅಲ್ಲಾಡಿಸುತ್ತಿದೆ. ಈ ಸೀರೆಯು ಬಿಳಿ ಬಣ್ಣದಲ್ಲಿ ಸುಂದರವಾಗಿ ಹೊಳೆಯುತ್ತಿದ್ದು ಅಂಗಡಿಯಲ್ಲಿ ವಿಶೇಷ ಆಕರ್ಷಣೆಯಾಗಿದೆ. ಇಷ್ಟೊಂದು ದರ ಇದೆ ಅಂದಮೇಲೆ ವಿಶೇಷತೆ ಕೂಡ ಇರಬೇಕಲ್ಲ ಅದೇನಂತ ನೋಡೋಣ.

  • ಈ ಸೀರೆಗೆ ಬಳಸುವ ಬಟ್ಟೆ, ತಯಾರಿಸುವ ವಿಧಾನ, ಹೊಲಿಗೆಗಳು ಈ ಸೀರೆಯ ವಿಶೇಷ.
  • ಈ ಸೀರೆಯನ್ನು ತಯಾರಿಸಲು ಎರಡು ವರ್ಷಗಳನ್ನು ತೆಗೆದುಕೊಂಡಿತು
  • ಉತ್ತರಪ್ರದೇಶದಲ್ಲಿ ಚಿಕನ್ ವರ್ಕ್ ಗಾರ್ಮೆಂಟ್ಸ್ ಗೆ ಉತ್ತಮ ಬೇಡಿಕೆ ಇದ್ದು, ಈ ಸೀರೆಯಲ್ಲೂ ಚಿಕನ್ ವರ್ಕ್ ಬಳಸಲಾಗಿದೆ.
  • ಈ ಸೀರೆಯ ವಿಶೇಷ ಮೋಡಿ ಎಂದರೆ ಶಿಫಾನ್ ಮತ್ತು ಚಿಕಂಕರಿ ಹೊಲಿಗೆಗಳು ಎನ್ನುತ್ತಾರೆ ಅಂಗಡಿ ನಿರ್ವಾಹಕರು.
  • ಈ ಸೀರೆಯನ್ನು ಚಿಕಂಕಾರಿ ಫ್ಯಾಬ್ರಿಕ್ ಮಿಶ್ರಣದಿಂದ ತಯಾರಿಸಲಾಗುತ್ತದೆ. ಅದು ಅದರ ವೆಚ್ಚದ ಹಿಂದಿನ ವಿಶಿಷ್ಟತೆ.
  • ಈ ಸೀರೆಯಲ್ಲಿ ಹರಳುಗಳನ್ನು ಬಳಸಲಾಗಿದೆ. ಅದರಿಂದಲೇ ಈ ಸೀರೆಗೆ ವಿಶೇಷ ಹೊಳಪು.
  • ಈ ಪ್ರಕಾಶಮಾನವಾದ ಬಿಳಿ ಸೀರೆಯನ್ನು ಲಕ್ನೋ ರಾಯಲ್ ಸೀರೆ ಎಂದು ಕರೆಯಲಾಗುತ್ತದೆ. ಈ ಸೀರೆಯಲ್ಲಿ ಜಪಾನ್‌ನ ಮುತ್ತುಗಳನ್ನು ಬಳಸಲಾಗಿದೆ.
  • ಇದರಲ್ಲಿ ಅಳವಡಿಸಿರುವ ನೆಟ್ ಕೂಡ ವಿಶಿಷ್ಟವಾಗಿದ್ದು, ಈ ಸೀರೆಯಲ್ಲಿ ಒಟ್ಟು 32 ರೀತಿಯ ಚಿಕನ್ ವರ್ಕ್‌ ಇದೆಯಂತೆ. ಈ ಸೀರೆ ಇಷ್ಟೊಂದು ದುಬಾರಿಯಾಗಲು ಅದೇ ದೊಡ್ಡ ಕಾರಣ ಎಂದು ಅಂಗಡಿ ಮಾಲೀಕರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!