ಹೊಸದಿಗಂತ ಡಿಜಿಟಲ್ ಡೆಸ್ಕ್:
ದೋಸೆ ಜೊತೆಗೆ ಟೊಮ್ಯಾಟೊ ಕೆಚಪ್ ಹಚ್ಚಿಕೊಂಡು ಯಾರು ತಿಂತಾರೆ ಹೇಳಿ? ಪಲ್ಯ ಚಟ್ನಿ ಹಾಗೂ ಸಾಂಬಾರ್ ಕೊಡಬೇಕಲ್ವಾ? ಇದೇ ಪ್ರಶ್ನೆಯನ್ನು ಗ್ರಾಹಕನೊಬ್ಬ ಹೊಟೇಲ್ ಮಾಲೀಕನಿಗೆ ಕೇಳಿದ್ದು, ಮಾಲೀಕ ಬೇಜಾವಾಬ್ದಾರಿತನದ ಉತ್ತರವನ್ನು ನೀಡಿದ್ದಾನೆ.
ಅಮ್ಮನಿಗೆ ಹುಟ್ಟುಹಬ್ಬಕ್ಕೆ ಹೊರಗೆ ಊಟ ಕೊಡಿಸೋಣ ಎಂದು ಮನೀಶ್ ಪಟ್ನಾಯಕ್ ಎನ್ನುವವರು ಹೊಟೇಲ್‌ಗೆ ಹೋಗಿದ್ದಾರೆ. ತಡವಾಗಿದ್ದ ಕಾರಣ ಊಟವನ್ನು ಪಾರ್ಸಲ್ ತೆಗೆದುಕೊಂಡು ಮನೆಗೆ ಬಂದಿದ್ದಾರೆ 140ರೂಪಾಯಿ ಕೊಟ್ಟು ದೋಸೆ ತಂದರೆ ದೋಸೆ ಜೊತೆಗೆ ಟೊಮ್ಯಾಟೊ ಕೆಚಪ್ ನೀಡಲಾಗಿತ್ತು. ಇದರಿಂದ ಸಿಟ್ಟಾದ ಮನೀಶ್ ಮರುದಿನ ಹೊಟೇಲ್‌ಗೆ ಬಂದು ಈ ರೀತಿ ಮಾಡಿದ್ಯಾಕೆ ಅನ್ನೋ ಪ್ರಶ್ನೆಯಿಟ್ಟಿದ್ದಾರೆ.
ನೀವು ಕೊಡೋ ದುಡ್ಡಿಗೆ ಇಡೀ ರೆಸ್ಟೋರೆಂಟ್ ಕೊಟ್ಬಿಡ್ತೀನಿ, ಸುಮ್ನೆ ತಲೆ ತಿನ್ಬೇಡ ಹೋಗಯ್ಯ ಎಂದಿದ್ದಾರೆ. ಮನೀಶ್ ವೃತ್ತಿಯಲ್ಲಿ ವಕೀಲರಾಗಿದ್ದು, ರೆಸ್ಟೋರೆಂಟ್ ಮೇಲೆ ಕೇಸ್ ಹಾಕಿ 11 ತಿಂಗಳು ಓಡಾಡಿ ಕೇಸ್ ಗೆದ್ದಿದ್ದಾರೆ.
ಗ್ರಾಹಕರಿಗೆ ಉತ್ತಮ ಸೇವೆ ನೀಡದೆ ಹಾಗೂ ಮಾನಸಿಕವಾಗಿ ಒತ್ತಡ ನೀಡಿದ್ದಕ್ಕೆ 3,500ರೂಪಾಯಿ ದಂಡ ವಿಧಿಸಿದೆ.