ಹೊಸದಿಗಂತ ಡಿಜಿಟಲ್ ಡೆಸ್ಕ್:ದ್ದು,
ಸ್ಯಾಂಡಲ್ ವುಡ್ ನಟ, ನಿರೂಪಕ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರಿನಲ್ಲಿ40 ಲಕ್ಷ ವಂಚನೆ ನಡೆದಿದೆ.
ನಿಶಾ ನರಸಪ್ಪ ಎಂಬ ಹೆಸರಿನ ಮಹಿಳೆ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರಿನಲ್ಲಿ ಹಣಕಾಸು ವಂಚನೆ ಎಸಗಿದ್ದಾಳೆ ಎಂಬ ಆರೋಪವಿದ್ದು, ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಕ್ಕಳ ಕಾರ್ಯಕ್ರಮ, ಟ್ಯಾಲೆಂಟ್ ಶೋ, ವಿವಿಧ ಜಾಹೀರಾತು ನೆಪದಲ್ಲಿ 40 ಲಕ್ಷ ವಂಚನೆ ವಂಚನೆ ಮಾಡಿದ ಖತರ್ನಾಕ್ ಲೇಡಿ ನೂರಾರು ಜನ ಪೋಷಕರಿಂದ ಹಣ ಪಡೆದು ವಂಚಿಸಿದ್ದಾಳೆ ಎನ್ನಲಾಗಿದೆ. ಬಳಿಕ ಪೋಷಕರು ಒಟ್ಟಾಗಿ ವಂಚಕಿಯನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಘಟನೆ ಸಂಬಂಧ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ .