ಹೊಸದಿಗಂತ ವರದಿ,ಮಡಿಕೇರಿ:
ವಿದ್ಯುತ್ ಬಿಲ್’ನಲ್ಲಿ ವ್ಯತ್ಯಾಸ ಬಂದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಮೀಟರ್ ರೀಡರ್’ಗೆ ಚೂರಿಯಿಂದ ಇರಿದ ಘಟನೆ ಸೋಮವಾರಪೇಟೆ ತಾಲೂಕಿನ ಮಾದಾಪುರದ ಜಂಬೂರುಬಾಣೆಯಲ್ಲಿ ನಡೆದಿದೆ.
ಮೀಟರ್ ರೀಡರ್ ಪ್ರಶಾಂತ್ ಎಂಬವರು ಗಾಯಗೊಂಡಿದ್ದು, ಆರೋಪಿ ರತೀಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ವಿದ್ಯುತ್ ಬಿಲ್‌ನಲ್ಲಿ ವ್ಯತ್ಯಾಸ ಬಂದ ಹಿನ್ನೆಲೆಯಲ್ಲಿ ರತೀಶ್ ಹಾಗೂ ಪ್ರಶಾಂತ್ ನಡುವೆ ಮಾತಿನ ಚಕಮಕಿ ನಡೆದಿದೆ. ಅವಾಚ್ಯ ಶಬ್ಧಗಳ ಪ್ರಯೋಗವೂ ನಡೆದಿದ್ದು, ಈ ಸಂದರ್ಭ ರತೀಶ್ ಚೂರಿಯಿಂದ ಇರಿದಿರುವುದಾಗಿ ಹೇಳಲಾಗಿದೆ.
ಗಾಯಾಳು ಪ್ರಶಾಂತ್ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಮಾದಾಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.