ಹೊಸದಿಗಂತ ಡಿಜಿಟಲ್ ಡೆಸ್ಕ್ :
ವರುಣನ ಅಬ್ಬರಕ್ಕೆ ದೆಹಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಹಿನ್ನೆಲೆ , ಕೇಜ್ರಿವಾಲ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ಸಂಸದ ಮತ್ತು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ , ‘ದೆಹಲಿಗರೇ ಎದ್ದೇಳಿ… ಯಾವುದೂ ಉಚಿತವಾಗಿಲ್ಲ..’ ಎಂದು ಟ್ವೀಟ್ ಮಾಡಿದ್ದಾರೆ.
ಎರಡು ದಿನದಿಂದ ಸುರಿಯುತ್ತಿರುವ ಮಳೆಗೆ ಯಮುನಾ ನದಿ ಒಳಹರಿವು ಗರಿಷ್ಠಮಟ್ಟಕೇರಿದೆ. ರಸ್ತೆ, ಮನೆ ಸೇರಿದಂತೆ ಎಲ್ಲ ಮೂಲಸೌಕರ್ಯಗಳು ಪ್ರವಾಹದಲ್ಲಿ ಮುಳುಗಿವೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಸರ್ಕಾರ ಹರಸಾಹಸಪಡುತ್ತಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಸಂಸದ ಗೌತಮ್ ಗಂಭೀರ್, ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ‘ದೆಹಲಿಗರೇ ಎಚ್ಚೆತ್ತುಕೊಳ್ಳಿ…. ದೆಹಲಿ ಗಟಾರವಾಗಿ ಮಾರ್ಪಟ್ಟಿದೆ…. ಯಾವುದೂ ಉಚಿತವಾಗಿಲ್ಲ…. ಇದೇ ನಿಜವಾದ ಬೆಲೆ….’ ಎಂದು ದೆಹಲಿ ಸರ್ಕಾರದ ಉಚಿತ ಯೋಜನೆಗಳ ಬಗ್ಗೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
Wake up Delhiites
Delhi has become a gutter
Nothing is for free, this is the PRICE!!— Gautam Gambhir (@GautamGambhir) July 13, 2023
ಯುಮುನಾ ನದಿ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಬಗ್ಗೆ ಆಡಳಿತರೂಢ ಪಕ್ಷ ಎಎಪಿ ಮತ್ತು ಬಿಜೆಪಿಯ ನಡುವೆ ತೀವ್ರ ಜಟಾಪಟಿ ನಡೆಯುತ್ತಿದೆ. ನಿರ್ಲಕ್ಷ್ಯ ಮತ್ತು ಪೂರ್ವ ಸಿದ್ದತೆ ಕೊರತೆಯೇ ಪ್ರವಾಹ ಪರಿಸ್ಥಿತಿಗೆ ಕಾರಣವೆಂದು ಬಿಜೆಪಿ ದೂರಿದೆ.